Home ವಿಶೇಷ ಭಾರತೀಯ ಕ್ರಾಂತಿಕಾರಿ ಕಲ್ಪನಾ ದತ್ತಾ

ಭಾರತೀಯ ಕ್ರಾಂತಿಕಾರಿ ಕಲ್ಪನಾ ದತ್ತಾ

0

ಕಲ್ಪನಾ ದತ್ತಾ ಅವರು ಮಾಸ್ಟರ್ ಡಾ.ಸೂರ್ಯ ಸೇನ್ ಅವರ ಕ್ರಾಂತಿಕಾರಿ ಗುಂಪಿನ ಸದಸ್ಯರಲ್ಲಿ ಒಬ್ಬರು (ಪ್ರಭಾವಿ ಭಾರತೀಯ ಕ್ರಾಂತಿಕಾರಿ). ಈಕೆ ಪ್ರೀತಿಲತಾ ವಡ್ಡೆದಾರ್ ಅವರ ಕೆಲಸವನ್ನು ಮುಂದುವರೆಸಿದ್ದರು. ಛಾತ್ರಿ ಸಂಘಟನೆಯ (ಮಹಿಳೆಯರ ಅರೆ ಕ್ರಾಂತಿಕಾರಿ ಸಂಸ್ಥೆ, ಕೋಲ್ಕತ್ತಾ) ಸದಸ್ಯರಾಗಿದ್ದರು. ಅವರು ಶಸ್ತ್ರಾಗಾರದ ಲೂಟಿ ಮತ್ತು ಪಹರ್ತೋಲಿ ಕ್ಲಬ್ ಅನ್ನು ಸುಡುವ ಮೊದಲ ಪ್ರಯತ್ನ ಮಾಡಿದ ತಂಡದ ಭಾಗವಾಗಿದ್ದರು (ಈ ದಾಳಿಯು ಪ್ರೀತಿಲತಾ ಸಾವಿಗೆ ಕಾರಣವಾಯಿತು). ಕಲ್ಪನಾ ದತ್ತಾ ಮತ್ತು ಮಾಸ್ಟರ್ ದಾ ಮಾಡಿದ ಎರಡನೇ ದಾಳಿಯ ಪ್ರಯತ್ನದಲ್ಲಿ, ಬ್ರಿಟಿಷರು ಮೊದಲೇ ಸಿದ್ಧರಾಗಿದ್ದರು. ಆ ಸಮಯದಲ್ಲಿ ಕಲ್ಪನಾ ದತ್ತಾ ತಪ್ಪಿಸಿಕೊಂಡರು, ಆದರೆ ಮಾಸ್ಟರ್ ದ ರವರು 1933 ರಲ್ಲಿ ಸೆರೆಹಿಡಿಯಲ್ಪಟ್ಟರು.  ಮೂರು ತಿಂಗಳ ನಂತರ, ಚಿತ್ತಗಾಂಗ್ ಶಸ್ತ್ರಾಸ್ತ್ರ ಲೂಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಈಕೆಯನ್ನು ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆರು ವರ್ಷಗಳ ನಂತರ  ಬಿಡುಗಡೆ ಮಾಡಲಾಯಿತು.

ಕಲ್ಪನಾ ದತ್ತಾ ವಿಜ್ಞಾನ ಕಲಿತ ವಿದ್ಯಾರ್ಥಿನಿ. ಖುದಿರಾಮ್ ಬೋಸ್ ಅವರ ಪ್ರಾಣತ್ಯಾಗದಿಂದ  ಪ್ರಭಾವಗೊಂಡಿದ್ದರು. ಚಿತ್ತಗಾಂಗ್‌ ನಲ್ಲಿದ್ದಾಗಲೇ ದೇಶಭಕ್ತಿಯು ಈಕೆಯ ಜೀವನದಲ್ಲಿ ಪ್ರವೇಶ ಮಾಡಿತ್ತು. ಕೋಲ್ಕತ್ತಾದ ಬೆಥೂನ್ ಕಾಲೇಜಿನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾಗ ಇದು ಮತ್ತಷ್ಟು ದೃಢವಾಯಿತು. ಹೋರಾಟದ ಹಾದಿಯಲ್ಲೇ, ಕಲ್ಪನಾ, 1995 ರಲ್ಲಿ ಕೊನೆಯುಸಿರೆಳೆದರು.

You cannot copy content of this page

Exit mobile version