Saturday, October 4, 2025

ಸತ್ಯ | ನ್ಯಾಯ |ಧರ್ಮ

ಭಾರತದ ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್‌ ಆಯ್ಕೆ

ನವದೆಹಲಿ: 14 ನೇ ಉಪರಾಷ್ಟ್ರಪತಿ ಆಯ್ಕೆಗಾಗಿ ಇಂದು(ಆಗಸ್ಟ್‌ 6) ನಡೆದ ಚುನಾವಣೆಯಲ್ಲಿ ಎನ್‌.ಡಿ.ಎಯಿಂದ ಸ್ಪರ್ಧಿಸಿದ್ದ  ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್‌ ಧನ್ಕರ್‌ 528 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕಿ ಮಾರ್ಗರೆಟ್‌ ಆಳ್ವ ಕಣದಲ್ಲಿದ್ದು182 ಮತಗಳನ್ನು ಪಡೆದಿದ್ದಾರೆ. 15 ಅಸಿಂಧು ಮತಗಳು ಬಿದ್ದಿವೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದ ಜುಂಜು ಜಿಲ್ಲೆಯ ಖಿತಹನಾ ಎನ್ನುವ ಗ್ರಾಮದವರಾದ 17 ರ ಹರೆಯದ ಜಗದೀಪ ಧನ್‌ಕರ್  ಮೂಲತ: ವಕೀಲರು. ರಾಜಸ್ಥಾನ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟಿನಲ್ಲಿ ಕೆಲಸ ಮಾಡಿದ್ದಾರೆ.

ಆಗಸ್ಟ್‌ 11 ರಂದು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page