Friday, June 14, 2024

ಸತ್ಯ | ನ್ಯಾಯ |ಧರ್ಮ

ಭಾರತ್‌ ಜೋಡೋ ಜನಪ್ರಿಯತೆ: ʼಕಾಸಿಗಾಗಿ ಸುದ್ದಿʼ ತಂತ್ರಕ್ಕೆ ಬಿಜೆಪಿ ಮೊರೆ

ಬೆಂಗಳೂರು : ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯು ಸೋನಿಯಾ ಗಾಂಧಿ ಕರ್ನಾಟಕಕ್ಕೆ ಬಂದ ನಂತರ ಮತ್ತೊಂದು  ಹಂತ ಮೇಲಕ್ಕೇರಿದ್ದು ಜೋಡೋ ಯಾತ್ರೆಯ ಜನಪ್ರಿಯತೆ ಹೆಚ್ಚುತಿರುವಾಗಲೇ ಬಿಜೆಪಿ ʼಕಾಸಿಗಾಗಿ ಸುದ್ದಿʼ ಎಂಬ ತಂತ್ರಗಾರಿಕೆಯನ್ನು ಶುರು ಮಾಡಿದೆ.

ರಾಜ್ಯ ಬಿಜೆಪಿ ಘಟಕವು ಕನ್ನಡದ ಸುದ್ದಿ ಪತ್ರಿಕೆಗಳಲ್ಲಿ ಕಾಂಗ್ರೆಸ್‌ ವಿರೋಧವಾಗಿ ಬಿಜೆಪಿ ಜಾಹಿರಾತುಗಳನ್ನು ಸುದ್ದಿಗಳಾಗಿ ಪ್ರಕಟಿಸುವುದರ ಮುಖಾಂತರ ಜನಗಳ ಮನಸನ್ನು ತಿರುಚಿಸುವಂತೆ ತಮ್ಮ ಅಭಿಪ್ರಾಯಗಳನ್ನು ಸುದ್ದಿಗಳಲ್ಲಿ ಪ್ರಕಟಿಸಿದ್ದಾರೆ. ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್ ಒಡೆತನದ ಕನ್ನಡ ಪ್ರಭ, ವಿಶ್ವೇಶ್ವರ ಭಟ್‌ ಅವರ ವಿಶ್ವವಾಣಿ, ಸಂಯುಕ್ತ ಕರ್ನಾಟಕ ಮತ್ತು ಹೊಸದಿಗಂತ ಪತ್ರಿಕೆ ಈ ನಾಲ್ಕೂ ದಿನಪತ್ರಿಕೆಗಳಲ್ಲಿ ಸುದ್ದಿಗಳು‌ ಬಿಜೆಪಿಗರ ಅಭಿಪ್ರಾಯದ ಜಾಹಿರಾತುಗಳು ಸುದ್ದಿಗಳಾಗಿ ಪ್ರಕಟಿಸಿರುವುದಲ್ಲದೇ, ಮುಖಪುಟದಲ್ಲಿ ಸುದ್ದಿಗಳನ್ನು ಹಾಕಿರುವ ಜಾಗವೂ ಒಂದೇ ಆಗಿರುವ ಕಾರಣ ಬಿಜೆಪಿಯವರೇ ದುಡ್ಡು ಕೊಟ್ಟು ಸುದ್ದಿಗಳನ್ನು ಮಾಡಿಸಿದ್ದಾರೆ ಎನ್ನುವ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದರ ಬೆನ್ನಲೇ, ರಾಜ್ಯ ಬಿಜೆಪಿ ಘಟಕವು ಇಂದು ಕನ್ನಡ ಪ್ರಭ, ವಿಶ್ವವಾಣಿ, ಸಂಯುಕ್ತ ಕರ್ನಾಟಕ  ಮತ್ತು ಹೊಸದಿಗಂತ ಈ ನಾಲ್ಕೂ ದಿನಪತ್ರಿಕೆ ಮುಖಪುಟದಲ್ಲಿ ಪ್ರಕಟವಾಗಿರುವ ಸುದ್ದಿಗಳನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಸರಣಿ  ಟ್ವೀಟ್‌ ಮಾಡುವುದರ ಮುಖಾಂತರ ಹಂಚಿಕೊಳ್ಳುವುದಲ್ಲದೇ ಒಂದೊಂದು ಸುದ್ದಿಗೂ ಟೀಕೆ ವಾಕ್ಯಗಳನ್ನು ಬರೆದು ಕಾಂಗ್ರೆಸ್‌ ಗೆ ಟೀಕೆ ಮಾಡುವ ಕೆಲವ ಮಾಡುತ್ತಿದ್ದಾರೆ. ಇದು ಇಂದು ಪ್ರಕಟವಾಗಿರುವ ಸುದ್ದಿಗಳು ಬಿಜೆಪಿಯವರ ಲಂಚದ ಸುದ್ದಿಗಳು ಎಂಬುವಂತೆ ಟ್ವೀಟಿಗರ ಟೀಕೆಗೆ ಒಳಗಾಗಿದೆ. ಕಾಂಗ್ರೆಸ್‌ನವರಿಗೆ ಹೆಚ್ಚು ಜನ ಬೆಂಬಲ ಸಿಗುತ್ತಿರುವುದನ್ನು ಗಮನಿಸುತ್ತಿರುವ ಬಿಜೆಪಿ, ʼಕಾಸಿಗಾಗಿ ಸುದ್ದಿʼ ತಂತ್ರಗಾರಿಕೆತನ್ನು ಕೈಗೊಂಡಿದೆ ಎನ್ನಲಾಗುತ್ತಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಭಾಗ್ಯದಾ ಲಕ್ಷ್ಮೀ ಬಾರಮ್ಮಾ: ಅಕ್ಟೋಬರ್ 10ರಿಂದ..

Related Articles

ಇತ್ತೀಚಿನ ಸುದ್ದಿಗಳು