Wednesday, July 30, 2025

ಸತ್ಯ | ನ್ಯಾಯ |ಧರ್ಮ

‘ಭಾರತ್ ಮಾತಾ ಕಿ ಜೈ’ ಎಂದ ವಿದ್ಯಾರ್ಥಿಗೆ ಶಿಕ್ಷೆ: ಸಂಘಟನೆಗಳ ಪ್ರತಿಭಟನೆ

ಮಧ್ಯಪ್ರದೇಶ: ಶಾಲೆಯ ಅಸೆಂಬ್ಲಿಯಲ್ಲಿ ರಾಷ್ಟ್ರಗೀತೆಯ ನಂತರ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಕ್ಕಾಗಿ ವಿದ್ಯಾರ್ಥಿಗೆ ಶಿಕ್ಷೆ ವಿಧಿಸಿದ್ದು, ಈ ವಿರುದ್ದ ಜನರು ಇಂದು ಮುಂಜಾನೆ ಜಮಾಯಿಸಿ ಪ್ರತಿಭಟನೆ ನಡೆಸಿ ಭಜನೆ ಮಾಡಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿನ ಕ್ರೈಸ್ಟ್ ಸೀನಿಯರ್ ಸೆಕೆಂಡರಿ ಶಾಲೆಯ ಬಳಿ ನಡೆದಿದೆ.

ಈ ಕುರಿತು ಮಾತನಾಡಿದ ಶಿಕ್ಷೆಗೊಳಗಾದ ವಿದ್ಯಾರ್ಥಿ, “ನಾನು ರಾಷ್ಟ್ರಗೀತೆಯ ನಂತರ ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿದೆ. ಆದ್ದರಿಂದ  ಶಿಕ್ಷಕರೊಬ್ಬರು ನನ್ನ ಕಾಲರ್ ಅನ್ನು ಹಿಡಿದು, ಹೊರಗೆಳೆದು ಪ್ರಿನ್ಸಿಪಾಲ್ ಬಳಿಗೆ ಹೋಗುವಂತೆ ಹೇಳಿದರು. ನನ್ನ ತರಗತಿಯ ಶಿಕ್ಷಕಿ ಇದನ್ನು ಮನೆಯಲ್ಲಿ ಹೇಳು ಶಾಲೆಯಲ್ಲಲ್ಲ ಎಂದು ಹೇಳಿ 4-5 ಅವಧಿ ನನ್ನನ್ನು ಮಹಡಿಯ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು” ಎಂದು ಹೇಳಿದರು.

ʼವಿದ್ಯಾರ್ಥಿಗಳು ರಾಷ್ಟ್ರಗೀತೆಯ ನಂತರ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲು ಮನೆಗೆ ಹೋಗುತ್ತಿದ್ದಾಗ ಒಬ್ಬ ವಿದ್ಯಾರ್ಥಿ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರು. ಅವರು ಅದನ್ನು ಅಗೌರವದಿಂದ ತಮಾಷಯಾಗಿ ಹೇಳಿದ, ದೇಶಪ್ರೇಮದಿಂದಲ್ಲ. ಈ ಕುರಿತು ಮುಂದೆ ಏನು ಮಾಡಬೇಕೆಂದು ನಿರ್ಧರಿಸಲು ಶಿಸ್ತು ಸಮಿತಿ ಸಭೆಯನ್ನು ಮಾಡುತ್ತೇವೆʼ ಎಂದು ಕ್ರೈಸ್ಟ್ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ಫಾದರ್ ಥಾಮಸ್ ಹೇಳಿದರು.

‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷೆ ವಿಧಿಸಿದ ನಂತರ ಕೆಲವು ಪೋಷಕರು ಮತ್ತು ಕೆಲವು ಸಂಘಟನೆಗಳು ಶಾಲೆಯ ಹೊರಗೆ ಪ್ರತಿಭಟನೆ ನಡೆಸುತ್ತಿವೆ. ಈ ಕುರಿತು ನೀಡಿರುವ ದೂರಿನ ಆಧಾರದ ಮೇಲೆ  ಎಫ್‌ಐಆರ್ ದಾಖಲಿಸಲಾಗುವುದು ಎಂದು ಗುನಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ ವೀರೇಂದ್ರ ಸಿಂಗ್ ಬಘೇಲ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page