ಭಾರತದ ಲಸಿಕಾ ಉತ್ಪಾದನಾ ಸಾಮರ್ಥ್ಯವನ್ನು ಶ್ಲಾಘಿಸಿದ ಅಮೇರಿಕಾ

ಹೊಸದಿಲ್ಲಿ: ಕೋವಿಡ್ ಬಿಕ್ಕಟ್ಟನ್ನು ಭಾರತ ನಿಭಾಯಿಸುವ ಬಗ್ಗೆ ಮಾತನಾಡಿದ ಕೋವಿಡ್‌ ಸಾಂಕ್ರಾಮಿಕದ ಸಮನ್ವಯ ಅಧಿಕಾರಿ ಆಶಿಸ್‌ ಝಾರವರು ಭಾರತದ ಲಸಿಕಾ ಉತ್ಪಾದನಾ ಸಾಮರ್ಥ್ಯವನ್ನು ಅಮೇರಿಕಾ ಶ್ಲಾಘಿಸಿದ್ದಾರೆ.

ಅಕ್ಟೋಬರ್‌ 26ರಂದು ವೈಟ್‌ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋವಿಡ್‌ ಸಾಂಕ್ರಾಮಿಕದ ಸಮನ್ವಯ ಅಧಿಕಾರಿ ಆಶಿಸ್‌ ಝಾ ರವರು, ಭಾರತ ವಿಶ್ವದ ಅತೀ ದೊಡ್ಡ ಲಸಿಕಾ ರಫ್ತುದಾರ ರಾಷ್ಟ್ರವಾಗಿದೆ. ಭಾರತದ ಲಸಿಕಾ ಉತ್ಪಾದನಾ ಮಟ್ಟ ಸಾಮರ್ಥ್ಯ ʼಅಧ್ಬುತʼ ಎಂದು ಹೇಳಿದ್ದಾರೆ

ಇದುವರೆಗೆ ಭಾರತದಲ್ಲಿ ಒಟ್ಟು 219,57,62,231 ಡೋಸ್‌ ಲಸಿಕೆ ನೀಡಲಾಗಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಕೋವಿಡ್‌ ಲಸಿಕೆ ಪಡೆದಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು