ಭಾರತದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಚಾಲನೆ: ನಿತಿನ್ ಗಡ್ಕರಿ

ಮುಂಬೈ: ನಗರದ ವೈ ಬಿ ಸೆಂಟರ್‌ನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ. ಸ್ವಿಚ್ ಇವಿ೨ ಎಂದು ಹೆಸರಿಸಲಾದ ಡಬಲ್ ಡೆಕ್ಕರ್ ಬಸ್ಸ್ ಅನ್ನು ಮುಂಬೈ ನಾಗರಿಕ ಸಾರಿಗೆ ಸಂಸ್ಥೆಯು ಸೆಪ್ಟೆಂಬರ್‌ನಿAದ ಓಡಿಸಲಿದೆ ಎಂದು ತಿಳಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ ಅವರು “ಸುಸ್ಥಿರ ಕ್ರಾಂತಿಯ ಉತ್ತೇಜನ! ಇಂದು ಮುಂಬೈನಲ್ಲಿ ಆಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಅನ್ನು ಪ್ರಾರಂಭಿಸಲು ನನಗೆ ಸಂತೋಷವಾಗಿದೆ” ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು