Monday, June 23, 2025

ಸತ್ಯ | ನ್ಯಾಯ |ಧರ್ಮ

ಭಾರೀ ಮೊತ್ತಕ್ಕೆ ಮಾರಾಟವಾದ “ಮಾಂಕ್ ದಿ ಯಂಗ್” ಚಿತ್ರದ ಹಾಡುಗಳು

ಬೆಂಗಳೂರು: ಹೊಸ ತಂಡ ಸೇರಿ ನಿರ್ಮಿಸಿರುವ “ಮಾಂಕ್ ದಿ ಯಂಗ್” ಚಿತ್ರದ ಹಾಡುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು, ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕನ್ನು  ಖರೀದಿಸಿದೆ.

ಸುಪ್ರೀತ್ ಫಾಲ್ಗುಣ ಸಂಗೀತ ನೀಡಿರುವ ಈ ಚಿತ್ರದಲ್ಲಿ ಎರಡು ಸುಮಧುರ ಹಾಡುಗಳಿದೆ. ಅಶ್ವಿನ್ ಶಾನ್ ಭಾಗ್ ಬರೆದಿರುವ ಈ ಹಾಡುಗಳನ್ನು ಖ್ಯಾತ ಗಾಯಕರಾದ ಸಾದ್ವಿನಿ ಕೊಪ್ಪ ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.  ನವೆಂಬರ್ 28 ರಂದು ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡುವ ಸಿದ್ದತೆ ನಡೆಯುತ್ತಿದೆ.

ಖ್ಯಾತ ನಿರ್ದೇಶಕ, ನಟ ರಿಷಭ್ ಶೆಟ್ಟಿ ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದರು. ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ ನಿರ್ದೇಶಿಸಿದ್ದು, ಚಿತ್ರದಲ್ಲಿ  ಸರೋವರ್ ಅವರು  ನಾಯಕ ನಟ ಮತ್ತು ನಾಯಕಿಯಾಗಿ ಸೌಂದರ್ಯ ಗೌಡ ನಟಿಸಿದ್ದಾರೆ.

ನಿವೃತ್ತ ಆರ್ಮಿ ಆಫೀಸರ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಸರೋವರ್, ಗೋಪಿಚಂದ್,  ಲಾಲ್ ಚಂದ್ ಖತಾರ್ ಐದು ಜನ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದು, ನಿರ್ಮಾಪಕರೆಲ್ಲಾ ಈ ಚಿತ್ರದಲ್ಲಿ ನಟನೆಯನ್ನೂ ಮಾಡಿರುವುದು ಸಿನೆಮಾದ ವಿಶೇಷವಾಗಿದೆ.

ಕಾರ್ತಿಕ್ ಶರ್ಮ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹದ ನಿರ್ದೇಶನ ಹಾಗೂ ವಿಜೇತ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page