Monday, July 28, 2025

ಸತ್ಯ | ನ್ಯಾಯ |ಧರ್ಮ

ಭೀಕರ ಅಪಘಾತದಿಂದ 9 ಮಂದಿ ಸಾವು : ಧಾರ್ಮಿಕ ದರ್ಶನವೇ ಕುಟುಂಬಕ್ಕೆ ಮುಳ್ಳಾಯ್ತಾ?

ಹಾಸನದ : ಧಾರ್ಮಿಕ ಪ್ರವಾಸ ಮುಗಿಸಿ ಮನೆಗೆ ವಾಪಸ್ಸಾಗುವಾಗ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿರುವ ಘಟನೆ ಹಾಸನದ ಅರಸೀಕೆರೆ ತಾಲ್ಲೂಕಿನ ಗಾಂಧಿನಗರದ ಬಳಿ ನಡೆದಿದೆ.

ದಸರಾ ರಜೆಯ ಹಿನ್ನಲೆಯಲ್ಲಿ ಕುಟುಂಬದ 16 ಜನ ಸೇರಿ ಧರ್ಮಸ್ಥಳ, ಹಾಸನಾಂಬೆ ಸೇರಿದಂತೆ ಧಾರ್ಮಿಕ ಪ್ರವಾಸ ಮುಗಿಸಿ ಶನಿವಾರ ಮನೆಗೆ ತೆರಳುತ್ತಿದ್ದರು. ತಡರಾತ್ರಿ ಸುಮಾರು 10.50 ವೇಳೆ ಅರಸೀಕರೆಯ ಗಾಂಧಿನಗರದ ಬಳಿ ಭೀಕರ ಅಪಘಾತ ನಡೆದ್ದು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ದುರಂತ ನಡೆದಿದೆ. ರಾಂಗ್‌ ರೂಟ್‌ ನಲ್ಲಿ ಬಂದ ಮಿಲ್ಕ್‌ ಟ್ಯಾಂಕರ್‌ ಸರ್ಕಾರಿ ಸರ್ಕಾರಿ ಬಸ್‌ ಗೆ ಡಿಕ್ಕಿ ಹೊಡೆದು ಜಿಗ್‌ ಜಾಗ್‌ ರೀತಿಯಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿದ್ದು, ಟಿಟಿ ಸಂಪೂರ್ಣ ನಜ್ಜುಗುಜ್ಜಾದರಿಂದ ಮೃತರ ಸಂಖ್ಯೆ ಹೆಚ್ಚಾಗಿದೆ. ಬಸ್‌ ಚಾಲಕ ಹಠಾತ್‌ ಬ್ರೇಕ್‌ ಹಾಕಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ.

ಮಾಹಿತಿ ತಿಳಿದ ಬಾಣಾವರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ದೊಡ್ಡದೇನಹಳ್ಳಿಯ ಧ್ರುವ(2), ತನ್ಮಯ್‌(10), ಸಾಲಾಪುರರ ಲೀಲಾವತಿ(50), ಚೈತ್ರಾ(33), ಸಮರ್ಥ್‌(10),ಡಿಂಪಿ (12),ವಂದನಾ (20), ದೊಡ್ಡಯ್ಯ(60), ಭಾರತಿ(50) ಮೃತ ದುರ್ದೈವಿಗಳು ಎಂದು ಹೇಳಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page