Tuesday, December 31, 2024

ಸತ್ಯ | ನ್ಯಾಯ |ಧರ್ಮ

ಅಧಿಕಾರಿಗಳು, ಉದ್ಯಮಿದಾರರು ಸೇರಿ ನಕಲಿ ದಾಖಲೆ ಸೃಷ್ಠಿಭೂಮಿ ಉಳಿಸುವಂತೆ ಭೀಮ್ ಆರ್ಮಿ ಪ್ರತಿಭಟನೆ


ಹಾಸನ: ಹೆಚ್.ಆರ್.ಪಿ. ಜಾಗವೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರಾಗಿದ್ದ ಸರ್ಕಾರಿ ಭೂಮಿಯನ್ನು ಆಲೂರು ತಾಲ್ಲೂಕು ಅಧಿಕಾರಿಗಳು ಹಾಗೂ ಉದ್ಯಮಿದಾರರು ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ಮಾರಾಟ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಭೂಮಿಯನ್ನ ಉಳಿಸಿಕೊಡಲು ಆಗ್ರಹಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯಿAದ ಡಿಸಿ ಕಛೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಪ್ರದೀಪ್ ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಅಲೂರು ತಾಲ್ಲೂಕು, ಪಾಳ್ಯ ಹೋಬಳಿಯ, ಬೂದನಹಳ್ಳಿ ಗ್ರಾಮದ ಸರ್ವೇ ನಂ: 10 ರಲ್ಲಿ 100 ಎಕರೆ ಸರ್ಕಾರಿ ಜಾಗವಿದ್ದು, ಇದರಲ್ಲಿ 80 ಎಕರೆ ಜಮೀನನ್ನು ಹೇಮಾವತಿ ಮುಳುಗಡೆಯವರಿಗೆ ನೀಡಿದ್ದು, ಅದೇ ಸರ್ವೇ ನಂ. 10 ರಲ್ಲಿ ಉಳಿದ 20 ಎಕರೆ ಜಮೀನನ್ನು ಅದೇ ಗ್ರಾಮದ 10 ಜನ ದಲಿತ ಕುಟುಂಬಕ್ಕೆ ಸರ್ಕಾರದಿಂದ ತಲಾ 2 ಎಕರೆಯಂತೆ 1984-85 ರಲ್ಲಿ 10 ಕುಟುಂಬಕ್ಕೆ ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ಸಹ ಸಂಬAಧಪಟ್ಟ ಅಧಿಕಾರಿಗಳು ನೀಡಿರುತ್ತಾರೆ. ಇದು ದರಖಾಸ್ತು ಜಮೀನಾಗಿದ್ದು, ಅವರವರ ಹೆಸರಿಗೆ ಖಾತೆ ದಾಖಲಾತಿಗಳು ಸಹ ಆಗಿದ್ದು, ಇಲ್ಲಿಯವರೆಗೂ ಕಂದಾಯವನ್ನು ಪಾವತಿ ಮಾಡಿರುತ್ತಾರೆ. ಮತ್ತು ಸದರಿ ಜಮೀನಿನ ಮೇಲೆ ಬ್ಯಾಂಕ್ ಮತ್ತು ಸೊಸೈಟಿ ಸಂಘ ಸಂಸ್ಥೆಗಳಲ್ಲಿ ಕೃಷಿ ಸಾಲಗಳನ್ನು ಎಲ್ಲರೂ ಸಹ ಪಡೆದುಕೊಂಡಿರುತ್ತಾರೆ ಎಂದರು. 1984-85 ರಿಂದಲೂ ಸಾಗುವಳಿ ಮಾಡಿಕೊಂಡು ಸ್ವಾಧೀನಾನುಭವದಲ್ಲಿ ಇದ್ದುಕೊಂಡು ಈ ಜಮಿನಿನಿಂದಲೇ ಜೀವನವನ್ನು ನಡೆಸಿಕೊಂಡು ಬಂದಿರುತ್ತಾರೆ ಮತ್ತು ಇವರುಗಳು ಕಡು ಬಡವರಾಗಿದ್ದು, ಇವರುಗಳಿಗೆ ಯಾವುದೇ ಭೂಮಿಯು ಸಹ ಇರುವುದಿಲ್ಲಾ. ಸುಮಾರು 25 ರಿಂದ 30 ವರ್ಷಗಳು ಉಳುಮೆ ಮಾಡಿಕೊಂಡು ಅನುಭವದಲ್ಲಿ ಇರುವಾಗಲೇ ಚನ್ನರಾಯಪಟ್ಟಣದ ನಿವಾಸಿಯಾದ (ಆಶ್ವಿನಿ ಮೋಟಾರ್, ಹಾಸನ) ಪದ್ಮರಾಜ್ ಸ್ವಾಮಿ ಎಂಬುವವರು 20 ಎಕರೆ ಜಮೀನನ್ನು ನಾವು ಹೇಮಾವತಿ ಮುಳುಗಡೆದಾರರಿಂದ ಕೊಂಡುಕೊAಡಿದ್ದೇವೆ. ಈ ಜಾಗ ನಮಗೆ ಸೇರಿದ್ದು, ಎಂದು ಹೇಮಾವತಿ ಮುಳುಗಡೆಗೆ ಮೀಸಲಿರುವ ಜಾಗಕ್ಕೆ ಹೋಗದೆ ಮೂಲ ಮಂಜೂರಿದಾರರು ಬರದೆ ಸದರಿಯವರ ಮೂಲ ಮಂಜೂರಿ ದಾಖಲೆಗಳನ್ನು ನಾಶಪಡಿಸಿ ಈ ಜಾಗದಲ್ಲಿ ಸ.ರ್ವೇ ನಂ- 57,88,59,60,61 ಎಂಬುದಾಗಿ ಈ ಜಾಗವನ್ನು ಅಧಿಕಾರಿಗಳ ಸಹಾಯದಿಂದ ಕೂತಲ್ಲಿಯೇ ದುರಸ್ತಿಯನ್ನು ಮಾಡಿಕೊಂಡಿದ್ದಲ್ಲದೇ ಜಾಗವನ್ನು ಬಿಡಿಸಿಕೊಳ್ಳಲು ಬಾಡಿಗೆ ರೌಡಿಗಳನ್ನು ಕರೆದುಕೊಂಡು ಬಂದು ಬೆದರಿಸುತ್ತಿದ್ದಾರೆ ಎಂದು ದೂರಿದರು. ಜಮೀನನ್ನು ಉಳುಮೆ ಮಾಡಲು ಅಡ್ಡಿಪಡಿಸುತ್ತಿದ್ದರು. ಹಾಗೂ ಚಿಕ್ಕಯ್ಯ ಬಿನ್ ಜವರಪ್ಪನವರು ಸ್ವಾಧೀನದಲ್ಲಿ ಇದ್ದಂತಹ ಅವರ ಜಮೀನಿನಲ್ಲಿ ಶುಂಠಿ ಹಾಕುವಾಗ ಪದ್ಮರಾಜು ಹಾಗೂ ಅವರ ಕಡೆಯವರು ಬಂದು ಚಿಕ್ಕಯ್ಯ ಮತ್ತು ಅವರ ಮಗ ಸೋಮಶೇಖರ್ ಮತ್ತು ಹೆಂಡತಿ ಲಕ್ಷ÷್ಮಮ್ಮ ಅವರ ಮೇಲೆ ಹಲ್ಲೆ ನಡೆಸುತ್ತಾರೆ ಹಾಗೂ ಜೆಟ್ ಪೈಪುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದರು.
ನಂತರ ಅವರ ಮೇಲೆ ಎಫ್.ಐ.ಆರ್. ದಾಖಲಾಗಿ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿರುತ್ತದೆ. ಇವರುಗಳ ಹಲ್ಲೆಯನ್ನು ಇವರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಿದ್ದಾರೆ. ಇವರುಗಳಿಗೆ ಹಣಬಲ, ಜನಬಲ, ಹಾಗೂ ರಾಜಕೀಯ ಬೆಂಬಲ ಇರುವುದಿಂದ ಇವರ ಮೇಲೆ ಆಗಾಗೆ ಹಲ್ಲೆ ನಡೆಸುತ್ತಿದ್ದಾರೆ. ನಂತರ ಸದರಿಯವರು ತಾಲ್ಲೂಕು ಕಛೇರಿಗಳಲ್ಲಿ ಮೂಲ ದಾಖಲಾತಿಗಳನ್ನು ತೆಗೆದುಕೊಳ್ಳಲು ಅರ್ಜಿ ಸಲ್ಲಿಸಿದಾಗ ನಮಗೆ ಯಾವುದೇ ನಮ್ಮ ಮೂಲ ದಾಖಲಾತಿಗಳನ್ನು ಕೊಟ್ಟಿರುವುದಿಲ್ಲ. ಹಾಗೂ ಮೂಲ ದಾಖಲಾತಿಗಳು ಲಭ್ಯವಿಲ್ಲವೆಂಬುದಾಗಿ ಹಿಂಬರಹವನ್ನು ನೀಡಿ ದುಡ್ಡಿನ ಆಸೆಗೆ ಅಧಿಕಾರಿಗಳು ನಮ್ಮ ಮೂಲ ಕಡತಗಳನ್ನು ನಾಶಪಡಿಸಿರುತ್ತಾರೆ. ನಾವುಗಳು ಸ್ವಾಧೀನ ಬಿಡದ ಕಾರಣ ಪದ್ಮರಾಜ್ ಹಾಗು ಸ್ವಾಮಿ ರವರು 2018 ರಲ್ಲಿ ಕಲ್ಯಾಣ್ ಕುಮಾರ್ ಬಿನ್ ರಂಗೇಗೌಡ ಮತ್ತು ರಾಜಶೇಖರ್ ಪಿ.ಆರ್. ಬಿನ್ ರಂಗೇಗೌಡ ಅವರು ಹಣಬಲ, ರಾಜಕೀಯ ಬಲದಿಂದ ನಾವು ಈ ಜಮೀನನ್ನು ಬಿಡಿಸಿಕೊಳ್ಳುತ್ತೇವೆ ಎಂದು ಪದ್ಮರಾಜ್ ರವರಿಂದ ಜಮೀನನ್ನು ಖರೀದಿಸಿರುತ್ತಾರೆ. ತಾವುಗಳು ಮೇಲಿನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹಾಗೂ ಮೂಲ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್.ಆರ್.ಪಿ. ಜಾಗವೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರಾಗಿದ್ದ ಸರ್ಕಾರಿ ಭೂಮಿಯನ್ನು ಆಲೂರು ತಾಲ್ಲೂಕು ಸಂಭAದಪಟ್ಟ ಅಧಿಕಾರಿಗಳು ಹಾಗೂ ಉದ್ಯಮಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ಮಾರಾಟ ಮಾಡಿರುವವರ ವಿರುದ್ಧ ಕ್ರಮ ಕಾನೂನು ಕ್ರಮ ಕೈಗೊಂಡು ಸಂತ್ರಸ್ಥರ ಭೂಮಿಯನ್ನು ಉಳಿಸಿಕೊಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ತಾಲೂಕು ಅಧ್ಯಕ್ಷ ಡಿ.ಕೆ. ಹೇಮಂತ್, ಆಲೂರು ತಾಲೂಕು ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ರಘುಚಂದ್ರ, ಖಜಾಂಚಿ ಸಿದ್ದೇಶ್, ಗ್ರಾಮಸ್ಥರಾದ ಸಿದ್ದಯ್ಯ, ಚಿಕ್ಕಯ್ಯ, ಸಗನಯ್ಯ, ಚಂದ್ರಮ್ಮ, ಮಲ್ಲೇಶ್, ದ್ಯಾವಯ್ಯ, ದೊಡ್ಡಯ್ಯ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page