Wednesday, September 10, 2025

ಸತ್ಯ | ನ್ಯಾಯ |ಧರ್ಮ

ಭೀಮಾ ನದಿ ಅಬ್ಬರ: ಹೊಳೆಗಳಂತಾದ ರಸ್ತೆಗಳು ಜನರು ಕಂಗಾಲು

ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರವು ಭಾರಿ ಮಳೆ ಸುರಿದ  ಕಾರಣ ಉಜನಿ ಜಲಾಶಯದ ಸೊನ್ನಾ ಬ್ಯಾರೆಜ್‌ನಿಂದ ಭೀಮಾ ನದಿಗೆ 1.25 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಿದ್ದು ನದಿ ಉಕ್ಕಿ ಹರಿಯುತ್ತಿದೆ.

ಈ ಹಿನ್ನಲೆ ಅಫಜಲಪುರ ತಾಲೂಕಿನ  ಹಲವಡೆ ಹಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ನೀರಿನಿಂದ ಜಲಾವೃತವಾಗಿವೆ. ರಸ್ತೆಗಳು ಸಂಪೂರ್ಣ ನೀರಿನಿಂದ ಕೂಡಿದ್ದು, ಸಂಪರ್ಕ ಸ್ಥಗಿತಗೊಂಡಿದೆ. ಭೀಮಾ ನದಿಯಲ್ಲಿ ಕ್ಷಣಕ್ಷಣಕ್ಕು ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನಲೆ ಪ್ರವಾಹ ಭೀತಿ ಎದುರಾಗಿರುವುದರಿಂದ ಜನರು ಕಂಗಾಲಾಗಿದ್ದು, ಅಲ್ಲಿನ ಗ್ರಾಮಸ್ಥರಿಗೆ ಮುನ್ನೆಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಬೆಳಗಾವಿ ಹಾಗೂ ಮಹಾರಾಷ್ತ್ರ ಗಡಿಯಲ್ಲಿ ವಿಪರೀತ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ್‌ ನಗರದ ಕೆಲವು ಸ್ಥಳಗಳಲ್ಲಿ 200ಕ್ಕೂ ಹೆಚ್ಚು ಮನೆಗಳ ಆವರಣದಲ್ಲಿ 2 ಅಡಿಯಷ್ಟು ನೀರು ನಿಂತಿದ್ದು, ಇನ್ನು ಹೆಚ್ಚು ನೀರು ಆವರಿಸುತ್ತದೆ ಎಂಬ ಭಯ ಜನರಲ್ಲಿ ಮನೆಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page