Saturday, June 15, 2024

ಸತ್ಯ | ನ್ಯಾಯ |ಧರ್ಮ

ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ : ಸುಪ್ರೀಂ ಕೋರ್ಟ್‌

ತಮಿಳುನಾಡು : ಸ್ಮಾರ್ತ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿದೆ.

ʼಅದ್ವೈತ ತತ್ವ ಪಾಲಿಸುವ 5 ಇತರೆ ಬ್ರಾಹ್ಮಣರಿಗಿಂತ ಭಿನ್ನ. ಆದ್ದರಿಂದ ಸ್ಮಾರ್ತ ಬ್ರಾಹ್ಮಣರನ್ನು ಪ್ರತ್ಯೇಕ ಧಾರ್ಮಿಕ ಪಂಗಡವಾಗಿ ಘೋಷಿಸಬೇಕು ಮತ್ತು ಅವರಿಗೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡಬೇಕುʼ ಎಂದು ತಮಿಳುನಾಡಿನ ಸ್ಮಾರ್ತ ಬ್ರಾಹ್ಮಣರು ಮದ್ರಾಸ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ ಸ್ಮಾರ್ತ ಬ್ರಾಹ್ಮಣರು ಪ್ರತ್ಯೇಕ ಧಾರ್ಮಿಕ ಪಂಥ ಎನ್ನಿಸಿಕೊಳ್ಳುವುದಿಲ್ಲ. ಸ್ಮಾರ್ತ ಬ್ರಾಹ್ಮಣ ಎಂಬುದು ಕೂಡ ಒಂದು ಜಾತಿ ಅಷ್ಟೇ. ಇತರೆ ಬ್ರಾಹ್ಮಣರಿಗಿಂತ ಸ್ಮಾರ್ತ ಬ್ರಾಹ್ಮಣರು ಭಿನ್ನ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಕಾರಣ, ವಿಶಿಷ್ಟತೆ ಇಲ್ಲ. ಅಲ್ಲದೇ, ಸಂವಿಧಾನದ ಪರಿಚ್ಛೇದ 26 ಅಡಿ ಪ್ರತ್ಯೇಕ ಧರ್ಮಗಳಿಗೆ ಸಿಗುವ ಸವಲತ್ತನ್ನು ಇವರಿಗೆ ನೀಡಲಾಗದು. ಅದರಂತೆ, ಸ್ಮಾರ್ತ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗದು ಎಂದು ತೀರ್ಪು ನೀಡಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸ್ಮಾರ್ತ ಸಮುದಾಯದ ಮುಖಂಡರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಮುರಾರಿ ಹಾಗೂ ನ್ಯಾ, ರವೀಂದ್ರ ಭಟ್ ಅವರಿದ್ದ ಪೀಠ ದೇಶದಲ್ಲಿ ಸಾಕಷ್ಟು ಸಮುದಾಯಗಳು ಅದ್ವೈತ ತತ್ವ ಪಾಲಿಸುತ್ತಾರೆ ಎಂದು ಹೇಳಿ ಸ್ಮಾರ್ತ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿದೆ.

Related Articles

ಇತ್ತೀಚಿನ ಸುದ್ದಿಗಳು