Monday, July 28, 2025

ಸತ್ಯ | ನ್ಯಾಯ |ಧರ್ಮ

ಬೀದರ್‌| ಆಟೋ ರಿಕ್ಷಾ, ಟ್ರಕ್‌ ಡಿಕ್ಕಿ: 7 ಮಹಿಳೆಯರು ಸಾವು, 11 ಮಂದಿಗೆ ಗಾಯ

ಚಿಟಗುಪ್ಪ: ಶುಕ್ರವಾರ ತಡರಾತ್ರಿ ಆಟೋ ರಿಕ್ಷಾ ಮತ್ತು ಟ್ರಕ್ ಡಿಕ್ಕಿ ಹೊಡೆದ ಹಿನ್ನೆಯಲ್ಲಿ, 7 ಜನ ಮಹಿಳೆಯರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಚಿಟಗುಪ್ಪ ತಾಲೂಕಿನ ಬೆಮಳಖೇಡ ಗ್ರಾಮದಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಮಹಿಳೆಯರು ಕೂಲಿ ಕಾರ್ಮಿಕರಾಗಿದ್ದು, ಆಟೋ ರಿಕ್ಷಾದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿರುವ ವೇಳೆ, ಬೆಮಳಖೇಡ ಸರ್ಕಾರಿ ಶಾಲೆಯ ಬಳಿ ಟ್ರಕ್ ಡಿಕ್ಕಿ ಹೊಡೆದಿದೆ. ಈ ಕಾರಣ ಸ್ಥಳದಲ್ಲೇ ಏಳು ಜನ ಮಹಿಳೆಯರು ಸಾವನ್ನಪ್ಪಿದ್ದು, ಗಾಯಗೊಂಡ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಾಗಿಸಿದೆ ಎಂದು ತಿಳಿದುಬಂದಿದೆ.

ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿ, ಘಟನೆ ಕುರಿತು ಮಾಹಿತಿ ತಿಳಿದ ಬೆಮಳಖೇಡ ಪೊಲೀಸರು, ಮೃತರು, ಪಾರ್ವತಿ (40), ಪ್ರಭಾವತಿ (36), ಗುಂಡಮ್ಮ (60), ಯಾದಮ್ಮ (40), ಜಗ್ಗಮ್ಮ, 34) ಈಶ್ವರಮ್ಮ (55) ಮತ್ತು ರುಕ್ಮಿಣಿ ಬಾಯಿ (60) ಎಂದು ಗುರುತಿಸಿದ್ದಾರೆ.

ವಾಹನಗಳ ಚಾಲಕರು ಸೇರಿದಂತೆ ಒಟ್ಟು 11 ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನಲೆಯಲ್ಲಿ ಘಟನೆ ಕುರಿತು ಕೇಸ್‌ ದಾಖಲಾಗಿದೆ ಎಂದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page