Saturday, April 19, 2025

ಸತ್ಯ | ನ್ಯಾಯ |ಧರ್ಮ

“Toxic” : ಬಹು ನಿರೀಕ್ಷಿತ ‘ಯಶ್ 19’ ಚಿತ್ರದಿಂದ ಬಂತು ದೊಡ್ಡ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಸಿನೆಮಾದ ಹೆಸರು ಇಂದು ಬಿಡುಗಡೆ ಆಗಿದೆ. ಚಿತ್ರಕ್ಕೆ ‘Toxic’ ಎಂಬ ಟೈಟಲ್ ಕೊಟ್ಟಿದ್ದು, ಕನ್ನಡಿಗರದ್ದೇ ಪ್ರೊಡಕ್ಷನ್ ಹೌಸ್ KVN ಪ್ರೊಡಕ್ಷನ್ ಯಶ್ ಅವರ ಸಿನೆಮಾ ನಿರ್ಮಾಣದ ಹೊಣೆ ಹೊತ್ತಿದೆ.

ಯಶ್ ನಟನೆಯ 19ನೇ ಸಿನಿಮಾದ ಶೀರ್ಷಿಕೆ ಅಭಿಮಾನಿಗಳ ಕಣ್ಣು ಕುಕ್ಕುವಂತಿದೆ. ಸಾವಿರಾರೂ ಅಭಿಮಾನಿಗಳು ಒಂದೇ ಬಾರಿಗೆ ಟೈಟಲ್ ಟೀಸರ್ ವೀಕ್ಷಣೆ ಮಾಡಿದ್ದು ಆ ಮಟ್ಟಿಗೆ ‘Toxic’ ಟೈಟಲ್ ದಾಖಲೆ ಬರೆದಿದೆ. ಅಂದಹಾಗೆ ಯಶ್ ನಟನೆಯ 19ನೇ ಚಿತ್ರಕ್ಕೆ ಖ್ಯಾತ ನಟಿ ಸಾಯಿ ಪಲ್ಲವಿ ನಾಯಕಿ ಆಗಲಿದ್ದಾರೆ ಎನ್ನುವ ಸುದ್ದಿ ಕೇರಳ ಕಡೆಯಿಂದ ಕೇಳಿ ಬರುತ್ತಿದೆ. ಈಗಾಗಲೇ ಸಾಯಿ ಪಲ್ಲವಿಗೆ ಚಿತ್ರದ ಕತೆ ವಿವರಿಸಲಾಗಿದೆ, ಹಾಗೂ ಚಿತ್ರದ ಕಥೆ ಬಗ್ಗೆ ಸಾಯಿ ಪಲ್ಲವಿ ಕೂಡಾ ಉತ್ಸುಕತೆ ತೋರಿರುವ ಬಗ್ಗೆಯೂ ಮಾತುಗಳು ಕೇಳಿ ಬಂದಿದೆ.

ಇನ್ನು ಮಲಯಾಳಂ ಹಾಗೂ ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶಿಸಿ ಸೈ ಎನ್ನಿಸಿಕೊಂಡಿರುವ ದಕ್ಷಿಣದ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಚಿತ್ರದ ನಿರ್ದೇಶಕಿಯಾಗಿದ್ದು, “ಯಶ್ 19” ಬಹು ನಿರೀಕ್ಷಿತ ಚಿತ್ರಕ್ಕೆ ಮಹಿಳೆ ನಿರ್ದೇಶನದ ಜವಾಬ್ದಾರಿ ಸಿಕ್ಕಿದ್ದು ಸಿನೆಮಾದ ಮತ್ತೊಂದು ಹೆಗ್ಗಳಿಕೆ ಎನ್ನಬಹುದು. ‘ಲಯರ್ಸ್ ಡೈರಿ’ ಮತ್ತು ‘ಮೂತುನ್’ನಂತಹ ಸಿನಿಮಾಗಳಿಗೆ ಗೀತು ಮೋಹನದಾಸ್ ಪ್ರಸಿದ್ಧರಾಗಿದ್ದಾರೆ. ಲಯರ್ಸ್ ಡೈರಿ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಸೇರಿದಂತೆ ವಿಶ್ವದಾದ್ಯಂತ 6 ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡದ್ದು ಗೀತು ಅವರ ಸಿನೆಮಾ ಕರಿಯರ್ ನ ದೊಡ್ಡ ಮೈಲುಗಲ್ಲು.

ಚಿತ್ರದ ಟೈಟಲ್‌ನ ಸಖತ್ ವಿಭಿನ್ನವಾಗಿ ಅನೌನ್ಸ್ ಮಾಡಿದ್ದಾರೆ. ಆರಂಭದಲ್ಲಿ ಜೋಕರ್ ಕಾರ್ಡ್‌ ಬರುತ್ತದೆ ನಂತರ ನಿರ್ಮಾಣ ಸಂಸ್ಥೆ ಹೆಸರು ಬರಲಿದೆ. ಮೋನ್‌ಸ್ಟಾರ್‌ ಮೈಂಡ್‌ ಕ್ರಿಯೆಶನ್ಸ್‌ ಬೆನ್ನಲೆ ನಿರ್ದೇಶಕಿ ಗೀತಾ ಮೋಹನದಾಸ್‌ ಎಂದು ಅನೌನ್ಸ್ ಆಗುತ್ತದೆ. ಯಶ್ ಸಂಪೂರ್ಣ ಲುಕ್ ರಿವೀಲ್ ಅಗಿಲ್ಲ ಆದರೆ ಕೈಯಲ್ಲಿ ರುದ್ರಾಕ್ಷಿ, ತಲೆಯಲ್ಲಿ ತೋಪಿ ಸ್ಪಷ್ಟವಾಗಿ ಕಾಣಿಸುತ್ತದೆ. ಟಾಕ್ಸಿಕ್‌ ‘A fairy tale of Grown ups’ ಎಂದು ಟೈಟಲ್ ಅನೌನ್ಸ್ ಆಗುತ್ತದೆ. ‘Chaos is man and you want him’ ಅನ್ನೋ ಧ್ವನಿ ಕೇಳಿ ಬರುತ್ತದೆ. ಚಿತ್ರದ ಟೈಟಲ್ ಅನೌನ್ಸ್ ದಿನವೇ ಸಿನಿಮಾ ಏಪ್ರಿಲ್ 10 2025ರಲ್ಲಿ ರಿಲೀಸ್‌ ಎಂದು ರಿವೀಲ್ ಮಾಡಿದ್ದಾರೆ.

https://www.instagram.com/reel/C0k_MBiL9Fm/?igshid=ODhhZWM5NmIwOQ==

‘Toxic’ ಪದದಲ್ಲಿ ವಿಷಪೂರಿತ ಎಂಬ ಅರ್ಥ ಬರುವುದರಿಂದ ಮಾಸ್ ಅಭಿಮಾನಿಗಳನ್ನು ಮತ್ತೊಮ್ಮೆ ಯಶ್ ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಿವಿಧ ಮಾಧ್ಯಮಗಳಲ್ಲಿ ಸಿನೆಮಾದ ವಸ್ತುವಿನ ಬಗ್ಗೆ ಚರ್ಚೆಯಾಗುತ್ತಿದ್ದು, KGF ಚಿನ್ನದ ಬೇಟೆಯ ನಂತರ ‘Toxic’ ಮೂಲಕ ಇನ್ನೇನು ಹೇಳಲು ಹೊರಟಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page