Friday, April 18, 2025

ಸತ್ಯ | ನ್ಯಾಯ |ಧರ್ಮ

ಶ್ರದ್ಧಾ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್: ಸಾವಿಗೆ ಕಾರಣವಾಯಿತೇ ಪೊಲೀಸರ ನಿರ್ಲಕ್ಷ್ಯ?

ನವದೆಹಲಿ: ಕೆಲವು ದಿನಗಳಿಂದ ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ʼಶ್ರದ್ಧಾ ಹತ್ಯೆʼ ಪ್ರಕರಣ ಇದೀಗ ಮತ್ತೊಂದು ತಿರುವು ತೆಗೆದುಕೊಂಡಿದೆ. ತನ್ನ ಮಾಜಿ ಪ್ರೇಮಿ ಅಫ್ತಾಬ್ ತನ್ನನ್ನು ಹಿಂಸಿಸುತ್ತಿದ್ದಾನೆ ಎಂದು ಮೃತ ಶ್ರದ್ಧಾ 2 ವರ್ಷಗಳ ಹಿಂದೆಯೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವ ಪರಿಣಾಮ ಹಾಗೂ ಪೊಲೀಸರ ನಿರ್ಲಕ್ಷ್ಯ ಇಂದು ಶ್ರದ್ಧಾ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತಂತೆ ಶ್ರದ್ಧಾ 23 ನವೆಂಬರ್ 2020 ರಂದು ಪೊಲೀಸರಿಗೆ ಸಲ್ಲಿಸಿದ್ದ ದೂರಿನ ಪ್ರತಿ ಇದೀಗ ಸಾಮಾಜಿಕ ತಾಲತಾಣದಲ್ಲಿ ವೈರಲ್‌ ಆಗಿದೆ.

ಶ್ರದ್ಧಾ ನೀಡಿದ್ದ ದೂರಿನಲ್ಲಿ ಏನಿದೆ?

ಅಶ್ವಿನಿ ಶ್ರೀವಾಸ್ತವ ಎಂಬುವರು ಈ ದೂರಿನ ಪ್ರತಿಯನ್ನು ಹಂಚಿಕೊಂಡಿದ್ದು ಅದರಲ್ಲಿ ಪೊಲೀಸ್‌ ಅಧಿಕಾರಿಗಳ ಮೊಹರು ದಾಖಲಾಗಿದೆ. ಆ ದೂರಿನಲ್ಲಿ ಶ್ರದ್ಧಾ ʼಅಫ್ತಾಬ್ ನನ್ನನ್ನು 6 ತಿಂಗಳುಗಳಿಂದ ಹಿಂಸಿಸುತ್ತಿದ್ದು, ಹಲವು ಬಾರಿ ನನ್ನ ಕತ್ತು ಹಿಸುಕಿ ಉಸಿರು ಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದ, ಕೆಲವು ಸಲ ನನ್ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಎಲ್ಲಿಯಾದರು ಎಸೆದು ಬರುತ್ತೇನೆ ಎಂದು ಹೇಳುತ್ತಿದ್ದʼ ಎಂದು ಮಾಹಿತಿ ನೀಡಿದ್ದರು. ಎರಡು ವರ್ಷಗಳ ಹಿಂದೆಯೇ ತನ್ನ ಮತ್ತು ಅಫ್ತಾಬ್‌ ಪ್ರೇಮ ಸಂಬಂಧ ಕೊನೆಗೊಂಡಿದ್ದರ ಕುರಿತು ಸಹ ಶ್ರದ್ಧಾ ತಿಳಿಸಿದ್ದಳು. ʼನಾವು ಅಫ್ತಾಬ್‌ ಹಿರಿಯದ ಆಶೀರ್ವಾದದೊಂದಿಗೆ ಮದುವೆ ಆಗುವುದು ನಿಶ್ಚಿತವಾಗಿತ್ತು. ಆದರೆ ಈಗ ನಾನು ಅವನಿಂದ ದೂರ ಇರಲು ತೀರ್ಮಾನಿಸಿದ್ದೇನೆʼ ಎಂದು ದೂರಿನಲ್ಲಿ ಹೇಳಲಾಗಿತ್ತು. ʼನಾನು ಎಲ್ಲೇ ಕೈಗೆ ಸಿಗಲಿ ಹೊಡೆದು ಕೊಲ್ಲುವುದಾಗಿ ಅವನು ನನಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದಾನೆ. ಹೀಗಾಗಿ ನನ್ನ ಮೇಲೆ ಯಾವುದೇ ದೈಹಿಕ ಹಲ್ಲೆ ನಡೆದರೂ ಅವನೇ ಕಾರಣ. ನನಗೆ ರಕ್ಷಣೆ ಕೊಡಿʼ ಎಂದು ಶ್ರದ್ಧಾ ಈ ದೂರಿನ ಮೂಲಕ ವಿನಂತಿಸಿಕೊಂಡಿದ್ದರು.

ಶ್ರದ್ಧಾ ನೀಡಿರುವ ದೂರಿನ ಪ್ರತಿ

ʼನಾವು ಲಿವಿಂಗ್‌ ಟುಗೆದರ್‌ ನಲ್ಲಿರುವುದು ಅಫ್ತಾಬ್‌ ಪೋಷಕರಿಗೆ ತಿಳಿದಿತ್ತಲ್ಲದೆ ಅವರು ವಾರಕ್ಕೊಮ್ಮೆ ಭೇಟಿ ಮಾಡಿ ಹೋಗುತ್ತಿದ್ದರು. ಇಲ್ಲಿಯ ವರೆಗೂ ನಾವು ಜೊತೆಗೆ ಇದ್ದೆವುʼ ಎಂದು ತಿಳಿಸಿದ್ದ ಶ್ರದ್ದಾ ಸದ್ಯದ ಪರಿಸ್ಥಿತಿಯಲ್ಲಿ ನನ್ನ ಜೀವಕ್ಕೆ ತೊಂದರೆ ಇರುವುದರಿಂದ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page