ಬಿಹಾರದಲ್ಲಿ ವಿಶ್ವಾಸ ಮತಯಾಚನೆಗೂ ಮುನ್ನ ಸ್ಪೀಕರ್‌ ವಿಜಯ್‌ಕುಮಾರ್‌ ಸಿನ್ಹಾ ರಾಜೀನಾಮೆ

ಬಿಹಾರ: ನಿತಿಶ್‌ ಕುಮಾರ್‌ ನೇತೃತ್ವದ ಮಹಾಘಟಬಂಧನ್‌ ಸರ್ಕಾರದ ವಿಧಾನಸಭೆಯ ವಿಶ್ವಾಸಮತಯಾಚನೆ ಮುನ್ನವೇ ವಿಜಯ್‌ಕುಮಾರ್‌ ಸಿನ್ಹಾ ಸ್ಪೀಕರ್‌ ಹುದ್ದೆಗೆ ರಾಜೀನಾಮೆ ನೀಡಿದರು.

ಇದಕ್ಕೂ ಮುನ್ನಾ ಆಡಳಿತಾರೂಢ ಮೈತ್ರಿಕೂಟವು ಸಿನ್ಹಾ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ಮನವಿ ಸಲ್ಲಿಸಲಾಗಿತ್ತು.

ಇದಕ್ಕೆ ಉತ್ತರಿಸಿದ ಸಿನ್ಹಾ ಅವಿಶ್ವಾಸ ನಿಲುವಳಿ ಸ್ಪಷ್ಟವಾಗಿಲ್ಲ. ಅವಿಶ್ವಾಸ ನಿಲುವಳಿ ಮಂಡನೆಗೆ 9 ಮಂದಿ ಬರೆದ ಪತ್ರದಲ್ಲಿ 8 ಪತ್ರಗಳು ನಿಯಮಕ್ಕೆ ಅನುಗುಣವಾಗಿಲ್ಲ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು