Sunday, June 16, 2024

ಸತ್ಯ | ನ್ಯಾಯ |ಧರ್ಮ

ಬಿಲ್ಕಿಸ್‌ ಬಾನು ಪ್ರಕರಣ: ಬಿಡುಗಡೆಯನ್ನು ಖಂಡಿಸಿ ರಾಜ್ಯಾದಾದ್ಯಂತ ಪ್ರತಿಭಟನೆ

ಮೈಸೂರು: ಬಿಲ್ಕಿಸ್ ಭಾನು ಸಾಮೂಹಿಕ ಅತ್ಯಾಚಾರ ಹಾಗೂ 14 ಜನರ ಕೊಲೆಪ್ರಕರಣ ದಲ್ಲಿ ಬಿಡುಗಡೆಯಾದ 11 ಅಪರಾಧಿಗಳ ಕ್ಷಮಾದಾನ ಹಾಗೂ ಶಿಕ್ಷಾ ವಿನಾಯತಿ ಮತ್ತು ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಯನ್ನು ಖಂಡಿಸಿ, ಇಂದು (ಶನಿವಾರ), ಬೆಳಿಗ್ಗೆ 10.30 ಕ್ಕೇ, ಅಂಬೇಡ್ಕರ್ ಪ್ರತಿಮೆ, ಪುರಭವನ, ಮೈಸೂರು ಸೇರಿದಂತೆ ರಾಜ್ಯಾದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆ ಯಲ್ಲಿ 25 ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಸಂಘಟನೆಗಳಾದ ಸಮತಾ ವೇದಿಕೆ, RLHP, PUCL ಮೈಸೂರು, ಶಕ್ತಿ ಧಾಮ, AIMSS, AIPWA, NFIW, ಆಮ್ ಆದ್ಮಿ ಪಾರ್ಟಿ (ಆಪ್), ಸಿಪಿಐ ಎಂ ಎಲ್, ಸಿಪಿಎಂ, AIARLA (ಕೃಷಿ ಕೂಲಿ ಸಂಘ), ಎಸ್ ಎಫ್ ಐ, ಕನ್ನಡ ಕ್ರಿಯಾ ಸಮಿತಿ, CSSI ( Congregation of the Sisters of SaintTheresa), ODP, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧನಾ ವಿಧ್ಯಾರ್ಥಿ ಸಂಘಟನೆ, ಸಮತಾ ಅಧ್ಯಯನ ಕೇಂದ್ರ, Responsible Citizens of India,  ಹಿಂದುಳಿದ ವರ್ಗಗಳ ಸಂಘಟನೆ, ನವೋದಯ, C R I, ರೈತ ಸಂಘ, DSS, ರಂಗಕರ್ಮಿ ಸಂಘಟನೆ, ಹೀಗೆ ಹಲವು ಸಂಘ ಸಂಸ್ಥೆ ಭಾಗವಹಿಸಿದ್ದವು.

ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಖಂಡಿಸಿ ದಾವಣಗೆರೆಯಲ್ಲಿ ಪ್ರತಿಭಟನೆ

ಪ್ರತಿಭಟನೆಯಲ್ಲಿ ಶ್ರೀ ಪಾ ಮಲ್ಲೇಶ್, ಚಿತ್ರ ನಟ ಪ್ರಕಾಶ್ ರೈ, ಎಂ.ಎಸ್‌.ರಾಮೇಶ್ವರ ವರ್ಮಾ ,ಡಾ. ವಿ. ಲಕ್ಷ್ಮೀನಾರಾಯಣ, ಸಾಹಿತಿ ನ. ದಿವಾಕರ್, ಪ್ರೋ. ಕಾಳಚೆನ್ನೆಗೌಡ, ಪ್ರೋ ಆರ್‌.ಇಂದಿರ ಹಾಗೂ ಹಲವು ರಂಗಗಳಲ್ಲಿ ಕೆಲಸ ನಿರ್ವಹಿಸಿದ ಗಣ್ಯರು ಭಾಗವಹಿಸಿದ್ದರು.

ಈ ಪ್ರತಿಭಟನೆಯಲ್ಲಿ, ಹಲವು ಸಾಮಾಜಿಕ ರಂಗಗಳಿಂದ ಪ್ರೊಫೆಸರ್‌ಗಳು, ವಿಜ್ಞಾನಿಗಳು, ಡಾಕ್ಟರ್‌ಗಳು, ವಿದ್ಯಾರ್ಥಿ ಗಳು, ಪತ್ರಕರ್ತರು ಸಾಮಾಜಿಕ ಕಾರ್ಯ ಕರ್ತೆಯರು, ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಲ್ಲಿ ಭಾಗವಹಿಸಿದ್ದು, ಅತ್ಯಾಚಾರಿಗಳಿಗೆ ನೀಡಿರುವ ಕ್ಷಮಾಧಾನವನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು