Thursday, December 18, 2025

ಸತ್ಯ | ನ್ಯಾಯ |ಧರ್ಮ

AI ಕುರಿತಾದ ಮಸೂದೆ ಸಂಸತ್ತಿನಲ್ಲಿ ಮಂಡನೆ – 5 ಕೋಟಿವರೆಗೆ ದಂಡ ?

ನವದೆಹಲಿ : ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial intelligence) ಬೇಕು ಬೇಡಗಳ ಕುರಿತು ವಿಶ್ವಾದ್ಯಂತ ಚರ್ಚೆ ನಡೆಯುತ್ತಲೇ ಇದೆ. AI ಎಷ್ಟು ಪೂರಕವೋ ಅಷ್ಟೇ ಮಾರಕವೂ ಹೌದು ಎಂಬ ಕೆಲವು ನಿದರ್ಶನಗಳು ಕೂಡ ನಮ್ಮ ಮುಂದಿದೆ. ಆದ್ರೆ ತಂತ್ರಜ್ಞಾನವನ್ನು (Technology) ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಹೊರತು ದುರುಪಯೋಗ ಮಾಡಿಕೊಳ್ಳಬಾರದು ಎಂಬುದರ ಕುರಿತು ಸಂಸತ್ತಿನಲ್ಲಿ (Parliament) ಮಸೂದೆ (Bill) ಮಂಡನೆಯಾಗಿದೆ.

ಹೌದು, ಇನ್ಮುಂದೆ ಕೃತಕ ಬುದ್ಧಿಮತ್ತೆ ದುರುಪಯೋಗ ಮಾಡಿಕೊಂಡರೆ 5 ಕೋಟಿವರೆಗೆ ದಂಡ ವಿಧಿಸುವ ಬಗ್ಗೆ ಪ್ರಸ್ತಾಪವನೆ ಇರುವ ಖಾಸಗಿ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡನೆ ಮಾಡಲಾಗಿದೆ. ಎಐ ಬಳಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ದಂಡ ವಿಧಿಸುವ ಪ್ರಸ್ತಾವನೆಯನ್ನು ಬಿಜೆಪಿ ಸಂಸದೆ ಭಾರತಿ ಪಾರ್ಧಿ ಮಂಡನೆ ಮಾಡಿದ್ದಾರೆ.ಈ ಮಸೂದೆಯಲ್ಲಿ ಕೃತಕ ಬುದ್ಧಿಮತ್ತೆಗಾಗಿ ನೈತಿಕ ಸಮಿತಿ ಸ್ಥಾಪಿಸಬೇಕೆಂಬ ಅಂಶ ಉಲ್ಲೇಖಿಸಲಾಗಿದ್ದು, ಈ ಸಮಿತಿಯಲ್ಲಿ ಕಾನೂನು ತಂತ್ರಜ್ಞಾನ, ದತ್ತಾಂಶ ವಿಜ್ಞಾನ, ಮಾನವ ಹಕ್ಕು, ಶಿಕ್ಷಣ, ಕೈಗಾರಿಕೆ ಹಾಗೂ ನಾಗರಿಕ ಸಮಾಜದ ತಜ್ಞರು ಇರಬೇಕು ಎಂದು ಉಲ್ಲೇಖಿಸಲಾಗಿದೆ. ಎಐ ಡೆವೆಲಪರ್ ಗಳು ಮತ್ತು ಬಳಕೆದಾರರು ಪಾರದರ್ಶಕತೆ ಪ್ರಕ್ರಿಯೆ ಬರಬೇಕು. ಆಲ್ಗರಿದಮ್‌ ಪಕ್ಷಪಾತ ಮತ್ತು ತಾರತಮ್ಯವನ್ನು ತಪ್ಪಿಸಬೇಕು. ಎಐ ವ್ಯವಸ್ಥೆಯನ್ನು ಮೇಲಿಂದ ಮೇಲೆ ತಪಾಸಣೆ ಮಾಡಬೇಕು ಮತ್ತು ಎಐ ದುರುಪಯೋಗಕ್ಕೆ ಒಳಗಾದವರು ಈ ಸಮಿತಿಗೆ ದೂರು ಸಲ್ಲಿಸುವ ಹಕ್ಕು ಹೊಂದಿರಬೇಕು ಎಂದು ಈ ಮಸೂದೆ ಹೇಳುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page