Saturday, April 12, 2025

ಸತ್ಯ | ನ್ಯಾಯ |ಧರ್ಮ

ಬಿಟ್‌ಕಾಯಿನ್ ಹಗರಣ: ನಾಲ್ವರು ಪೊಲೀಸರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಎಸ್‌ಐಟಿಗೆ ಅನುಮತಿ

2020 ರಲ್ಲಿ ಬಂಧನಕ್ಕೊಳಗಾದ ನಂತರ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಅವರಿಂದ ಸಂಗ್ರಹಿಸಿದ ಪುರಾವೆಗಳನ್ನು ತಿರುಚಿದ ಆರೋಪ ಹೊತ್ತಿರುವ ಬೆಂಗಳೂರು ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ನಾಲ್ವರು ಮಾಜಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಕರ್ನಾಟಕ ಸರ್ಕಾರ ಪೊಲೀಸರಿಗೆ ಅನುಮತಿ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪರಾಧ ತನಿಖಾ ವಿಭಾಗದ ವಿಶೇಷ ತನಿಖಾ ತಂಡ (SIT) ಶ್ರೀಕಿ ಜೊತೆಗಿನ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ SIT ಗೆ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಟ್ ಕಾಯಿನ್ ಹಗರಣದ ಆರೋಪದ ಮೇಲೆ ಎಸ್‌ಐಟಿ ತಂಡ ನಾಲ್ವರು ಪೊಲೀಸ್ ಅಧಿಕಾರಿಗಳನ್ನು 2024 ರಲ್ಲೇ ಬಂಧಿಸಿತ್ತು. ಪ್ರಸ್ತುತ ಪೊಲೀಸ್ ಉಪ ವರಿಷ್ಠಾಧಿಕಾರಿಯಾಗಿರುವ ಶ್ರೀಧರ್ ಪೂಜಾರ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪ್ರಶಾಂತ್ ಬಾಬು, ಚಂದ್ರಧರ್ ಎಸ್‌ಆರ್ ಮತ್ತು ಲಕ್ಷ್ಮಿಕಾಂತಯ್ಯ ಅವರು ಬಂಧಿತ ಪೊಲೀಸ್ ಅಧಿಕಾರಿಗಳಾಗಿದ್ದಾರೆ.

ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಮತ್ತು ಆತನ ಸಹಚರ ರಾಬಿನ್ ಖಂಡೇಲ್ವಾಲ್ ಅವರಿಂದ ವಶಪಡಿಸಿಕೊಂಡ ಸಾಕ್ಷ್ಯಗಳನ್ನು ಖಾಸಗಿ ಸೈಬರ್ ತಜ್ಞರ ಬಳಸಿಕೊಂಡು ಪೊಲೀಸರು ತಿರುಚಿದ್ದಾರೆ ಎಂಬ ಆರೋಪದ ಮೇಲೆ ಎಸ್‌ಐಟಿ ಪುರಾವೆಗಳನ್ನು ಸಂಗ್ರಹಿಸಿದೆ. ಆದರೆ ಪ್ರಕರಣದಲ್ಲಿ ಪೊಲೀಸರು ಒಳಗೊಂಡಿರುವ ಭ್ರಷ್ಟಾಚಾರದ ಬಗ್ಗೆಯೂ ಅದು ಗಮನಹರಿಸುತ್ತಿದೆ. ಈ ನಡುವೆ ಆರೋಪಿಗಳಲ್ಲಿ ಒಬ್ಬರಿಂದ ತಾಂತ್ರಿಕ ತಜ್ಞರಿಗೆ ಬಿಟ್‌ಕಾಯಿನ್ ವರ್ಗಾವಣೆಯಾಗಿದೆ. ಹ್ಯಾಕರ್‌ನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ನಂತರ (2020 ರಲ್ಲಿ) ಆತನ ಬಳಿ ಇದ್ದ ಕ್ರಿಪ್ಟೋಕರೆನ್ಸಿ ಕಣ್ಮರೆಯಾದ ಹಿನ್ನೆಲೆಯಲ್ಲಿ ಈ ಕೃತ್ಯದ ಹಿಂದೆ ಪೊಲೀಸ್ ಅಧಿಕಾರಿಗಳ ಕೈವಾಡ ಇದೆ..” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಗಳು ಪೊಲೀಸರಿಂದ ಡಜನ್ಗಟ್ಟಲೆ ಲೋಪಗಳನ್ನು ಬಹಿರಂಗಪಡಿಸಿವೆ. ಇದರಲ್ಲಿ ಆರೋಪಿಗಳಿಂದ ಅಕ್ರಮ ಬಂಧನ, ಲಾಗಿನ್‌ಗಳು, ಪಾಸ್‌ವರ್ಡ್‌ಗಳು ಮತ್ತು ಕಂಪ್ಯೂಟರ್ ಬಳಕೆಗೆ ಸಂಬಂಧಿಸಿದ ಡೇಟಾದ ದಾಖಲೆಗಳ ಕೊರತೆ ಮತ್ತು ಹ್ಯಾಕಿಂಗ್‌ಗೆ ಅನುಕೂಲವಾಗುವಂತೆ ಶ್ರೀಕಿಗೆ ಪೊಲೀಸರು 60,000 ರೂ. ಮೌಲ್ಯದ ಲ್ಯಾಪ್‌ಟಾಪ್ ಅನ್ನು ಒದಗಿಸಿರುವುದು ಸಹ ಸೇರಿವೆ.

ಬಿಜೆಪಿ ಸರ್ಕಾರದ (2019-2023) ಅವಧಿಯಲ್ಲಿ ನಡೆದಿದ್ದ ಬಿಟ್‌ಕಾಯಿನ್ ಹಗರಣದ ತನಿಖೆಗಾಗಿ ಕಾಂಗ್ರೆಸ್ ಸರ್ಕಾರವು ಜೂನ್ 2023 ರಲ್ಲಿ ಸಿಐಡಿ ಎಸ್‌ಐಟಿಯನ್ನು ರಚಿಸಿತು . 2020 ರಲ್ಲಿ ಹ್ಯಾಕರ್ ಬಂಧನದ ನಂತರ ಅಂತರರಾಷ್ಟ್ರೀಯ ವಿನಿಮಯ ಕೇಂದ್ರಗಳು ಮತ್ತು ಗೇಮಿಂಗ್ ಸೈಟ್‌ಗಳಿಂದ ಹ್ಯಾಕರ್ ಕದ್ದಿದ್ದ ಕೋಟ್ಯಂತರ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ವಶಪಡಿಸಿಕೊಳ್ಳಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page