Saturday, July 26, 2025

ಸತ್ಯ | ನ್ಯಾಯ |ಧರ್ಮ

ಸಿಎಂ ಸಿದ್ದರಾಮಯ್ಯ ಪತ್ನಿ, ಸೊಸೆ ಅವಹೇಳನ ಮಾಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಚ್‌ ಎಸ್ ಟ್ವೀಟ್

ಬೆಂಗಳೂರು: ಸಾರ್ವಜನಿಕ ವಿಷಯಗಳಿಗೆ ಖಾಸಗಿ ವಿಷಯವನ್ನು ತಳುಕು ಹಾಕಿ ಕೊಳಕು ಭಾಷೆಯಲ್ಲಿ ಬರೆಯುವ ಬಿಜೆಪಿಯ ಚಾಳಿ ಮುಂದುವರೆದಿದ್ದು, ಬಿಜೆಪಿ ಸದಸ್ಯೆ ಶಕುಂತಲಾ ಎಚ್‌ ಎಸ್‌ ಎಂಬಾಕೆ ಸಿದ್ಧರಾಮಯ್ಯನವರ ಕುರಿತು ಅವಹೇಳನಕಾರಿಯಾಗಿ ಬರೆದು ಟ್ವೀಟ್‌ ಮಾಡಿದ್ದಾರೆ.

ತನ್ನ ಅಭಿರುಚಿ ಹೀನ ಟ್ವೀಟುಗಳಿಂದಲೇ ಟ್ವಿಟರ್‌ನಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿರುವ ಈಕೆ ಕಾಂಗ್ರೆಸ್‌ ಪಕ್ಷದ ಟ್ವೀಟ್‌ ಒಂದರ ಸ್ಕ್ರೀನ್‌ ಶಾಟ್‌ ಹಾಕಿ “ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ… ಸಿದ್ಧರಾಮಯ್ಯನವರ ಸೊಸೆ or ಹೆಂಡ್ತಿ ಅವ್ರ ವಿಡಿಯೋವನ್ನು ಇದೆ ತರ ಮಾಡಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ?” ಎಂದು ಮರುಪ್ರಶ್ನೆ ಹಾಕಿ ಟ್ವೀಟ್‌ ಮಾಡಿದ್ದಾರೆ.


https://twitter.com/ShakunthalaHS/status/1683878578101063680?s=20

ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ. ಈಕೆಗೆ ಇಂತಹ ಟ್ವೀಟ್‌ ಮಾಡುವ ಇತಿಹಾಸವೇ ಇದ್ದು ಹಿಂದೆ ಹಲವು ಬಾರಿ ವಿವಾದಕ್ಕೀಡಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page