Friday, June 14, 2024

ಸತ್ಯ | ನ್ಯಾಯ |ಧರ್ಮ

ಚುನಾವಣಾ ಬಾಂಡ್‍ ಮೂಲಕ ಬಿಜೆಪಿ ಭ್ರಷ್ಟಾಚಾರಗಳು ಬಯಲಾಗುತ್ತಿವೆ: ಜೈರಾಮ್‌ ರಮೇಶ್‌

ನವದೆಹಲಿ: ಚುನಾವಣಾ ಬಾಂಡ್ ಮೂಲಕ ಬಿಜೆಪಿಯ ಹಲವಾರು ಬಗೆಯ ಭ್ರಷ್ಟಾಚಾರಗಳು ಬಯಲಿಗೆ ಬರುತ್ತಿವೆ. ನಿಮ್ಮ ಕಂಪನಿಗೆ ಸರ್ಕಾರದ ರಕ್ಷಣೆ ಬೇಕೆಂದರೆ ದೇಣಿಗೆ ಕೊಡಿ ಎಂದು ಕೇಳುವುದು, ಕಿಕ್‍ಬ್ಯಾಕ್ ಪಡೆಯುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹಣ ದುರುಪಯೋಗ ಮಾಡುವುದು ಸೇರಿದಂತೆ  ನಾಲ್ಕು ಬಿಜೆಪಿಯ ಭ್ರಷ್ಟ ತಂತ್ರಗಾರಿಕೆಗಳು ಬಯಲುಗೊಗೊಂಡಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ವಿಶಿಷ್ಟ ಬಾಂಡ್ ಐಡಿ ಸಂಖ್ಯೆಗಳನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ. ಇದರಿಂದ ಯಾವ ದಾನಿಗಳು ಯಾವ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ ಎನ್ನುವುದು ಕೂಡಾ ತಿಳಿಯುತ್ತದೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ  ಆಗ್ರಹಿಸಿದ್ದಾರೆ.

ಚುನಾವಣೆ ಮುಗಿಯುವವರೆಗೂ ವಿವರ ಬಹಿರಂಗಪಡಿಸುವುದನ್ನು ಮುಂದೂಡುವ ಸತತ ಪ್ರಯತ್ನ ಎಸ್‌ಬಿಐ ಮತ್ತು ಬಿಜೆಪಿ ಮಾಡಿದವು. ಈಗ ಸುಪ್ರೀಂಕೋರ್ಟ್ ಒತ್ತಡದ ನಿರ್ದೇಶನದಂತೆ ಎಸ್‍ಬಿಐ ಒಂದಿಷ್ಟು ವಿವರಗಳನ್ನು ಬಹಿರಂಗಪಡಿಸಿದೆ. 1300ಕ್ಕೂ ಅಧಿಕ ಕಂಪನಿಗಳು ಮತ್ತು ವ್ಯಕ್ತಿಗಳು ಚುನಾವಣಾ ಬಾಂಡ್‍ಗಳ ಮೂಲಕ ದೇಣಿಗೆ ಬಿಜೆಪಿಗೆ ದೇಣಿಗೆ ನೀಡಿದ್ದಾರೆ. ಬಿಜೆಪಿ 2019ರ ಬಳಿಕ 6000 ಕೋಟಿಗೂ ಅಧಿಕ ಮೊತ್ತದ ದೇಣಿಗೆ ಸ್ವೀಕರಿಸಿದೆ. ಚುನಾವಣಾ ಬಾಂಡ್‍ಗಳ ವಿವರಗಳು ಸದ್ಯಕ್ಕೆ ಬಿಜೆಪಿಯ ನಾಲ್ಕು ತಂತ್ರಗಳನ್ನು ಬಯಲುಗೊಳಿಸಿವೆ. ಇನ್ನೆಷ್ಟು ತಂತ್ರಗಳಿವೆಯೋ ಎಂದು ಅವರು ಆರೋಪಿಸಿದ್ದಾರೆ.

ಮೇಘಾ ಎಂಜಿನಿಯರಿಂಗ್ ಎಂಬ ಕಂಪನಿಯು 2023ರ ಏಪ್ರಿಲ್‍ನಲ್ಲಿ 800 ಕೋಟಿಗೂ ಅಧಿಕ ಮೊತ್ತವನ್ನು ಬಾಂಡ್ ಖರೀದಿಗೆ ವ್ಯಯಿಸಿದೆ. ಇದಕ್ಕೂ ಒಂದು ತಿಂಗಳ ಮುನ್ನ ಕಂಪನಿಗೆ 14400 ಕೋಟಿ ರೂಪಾಯಿ ಮೊತ್ತದ ಥಾಣೆ- ಬೊರಿವಿಲಿ ಅವಳಿ ಸುರಂಗ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಹೀಗೆ ಕಂಪನಿಗಳ ಜೊತೆ ಕೊಡುವ ಮತ್ತು ತೆಗೆದುಕೊಳ್ಳುವ ಭ್ರಷ್ಟಾಚಾರವನ್ನು ಬಿಜೆಪಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು