Monday, July 1, 2024

ಸತ್ಯ | ನ್ಯಾಯ |ಧರ್ಮ

BJP ವಿಷಸರ್ಪವಾದರೆ AIDMK ಅದಕ್ಕೆ ಆಶ್ರಯ ನೀಡುವ ಕಸವಿದ್ದಂತೆ – ಉದಯನಿಧಿ ಸ್ಟಾಲಿನ್

ಕೆಲ ದಿನಗಳ ಹಿಂದೆ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿ ದೇಶಾದ್ಯಂತ ರಾಜಕೀಯ ಸಂಚಲನ ಮೂಡಿಸಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಈ ಬಾರಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಅವರು ತಮ್ಮ ಹೇಳಿಕೆಯಲ್ಲಿ BJP ಪಕ್ಷವನ್ನು ವಿಷಕಾರಿ ಹಾವಿಗೆ ಹೋಲಿಸಿದ್ದು, ಅದಕ್ಕೆ ಬೆಂಬಲ ನೀಡುವ AIDMK ಪಕ್ಷವನ್ನು ಅದಕ್ಕೆ ಆಶ್ರಯ ನೀಡುವ ಕಸಕ್ಕೆ ಹೋಲಿಸಿದ್ದಾರೆ.

ಅವರು ಬಿಜೆಪಿಯನ್ನು ವಿಷಕಾರಿ ಹಾವು ಎಂದು ಕರೆದರು ಮತ್ತು ತಮ್ಮ ವಿರೋಧ ಪಕ್ಷವಾದ ಎಐಎಡಿಎಂಕೆಯನ್ನು ಹಾವುಗಳಿಗೆ ಆಶ್ರಯ ನೀಡುವ ಕಸಕ್ಕೆ ಹೋಲಿಸಿದರು. ಭಾನುವಾರ ತಮಿಳುನಾಡಿನ ನೈವೇಲಿಯಲ್ಲಿರುವ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ಮನೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉದಯನಿಧಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಲೋಕಸಭೆ ಸಂಸದ ಹಾಗೂ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ.ರಾಜಾ ಅವರು ಪ್ರಧಾನಿ ಮೋದಿಯನ್ನು ಹಾವಿಗೆ ಹೋಲಿಸಿದ ಕೆಲವೇ ದಿನಗಳಲ್ಲಿ ಉದಯನಿಧಿ ಈ ಹೇಳಿಕೆ ನೀಡಿರುವುದು ಗಮನಾರ್ಹ.

ಮುಂದುವರೆದ ಮಾತನಾಡಿದ ಅವರು “ನೀವು ಮನೆಯಿಂದ ಹಾವನ್ನು ಓಡಿಸಿದರಷ್ಟೇ ಸಾಲದು, ಅದಕ್ಕೆ ಆಶ್ರಯ ನೀಡುವ ಕಸವನ್ನೂ ಸ್ವಚ್ಛಗೊಳಿಸಬೇಕು. ಹಾಗೆ ಮಾಡದೆ ಹೋದರೆ ಹಾವು ಮತ್ತೆ ಬಂದು ಕಸದಲ್ಲಿ ಆಶ್ರಯ ಪಡೆಯುವ ಸಾಧ್ಯತೆಯಿರುತ್ತದೆ” ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ಅವರು, “ಈ ವಿಷಯವನ್ನು ಪ್ರಸ್ತುತ ಪರಿಸ್ಥಿತಿಯೊಂದಿಗೆ ಹೋಲಿಸಿದರೆ, ತಮಿಳುನಾಡು ರಾಜ್ಯ ನಮ್ಮ ಮನೆಯಾಗಿದೆ. ಬಿಜೆಪಿ ವಿಷಕಾರಿ ಹಾವಾಗಿದ್ದರೆ, ಎಐಎಡಿಎಂಕೆ ಅದಕ್ಕೆ ಆಶ್ರಯ ನೀಡಬಲ್ಲ ಕೆಟ್ಟ ಕಸ. ಆ ಕಸವನ್ನು ತೊಲಗಿಸದ ಹೊರತು ವಿಷಕಾರಿ ಹಾವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಬಿಜೆಪಿ ಪಕ್ಷವನ್ನು ತೊಲಗಿಸಲು ಮೊದಲು ಎಐಎಡಿಎಂಕೆ ಪಕ್ಷವನ್ನು ತೊಲಗಿಸಬೇಕು,’’ ಎಂದರು.

ಈ ನಡುವೆ ಉದಯನಿಧಿಯ ʼಸನಾತನ ಧರ್ಮ ಸಾಂಕ್ರಾಮಿಕ ಪಿಡುಗಿದ್ದಂತೆ, ಸಾಂಕ್ರಾಮಿಕ ರೋಗವಿರುವಲ್ಲಿ ಪ್ರಗತಿ ಸಾಧ್ಯವಿಲ್ಲ ಅದನ್ನು ಹೋಗಲಾಡಿಸಬೇಕುʼ ಎಂದು ಹೇಳಿದ್ದಕ್ಕೆ ಕ್ಷಮೆ ಕೇಳಬೇಕೆಂದು ಹೋರಾಟ ನಡೆಸುತ್ತಿರುವಾಗ ಈ ಹೇಳಿಕೆ ಬಂದಿರುವುದು ಅದಕ್ಕೆ ಇನ್ನಷ್ಟು ಇರಿಸುಮುರಿಸು ತಂದಿದೆ. ಇದುವರೆಗೆ ಆ ಪಕ್ಷದಿಂದ ಯಾವುದೇ ಹೇಳಿಕೆ ಬಂದಿಲ್ಲ.

Related Articles

ಇತ್ತೀಚಿನ ಸುದ್ದಿಗಳು