Tuesday, July 29, 2025

ಸತ್ಯ | ನ್ಯಾಯ |ಧರ್ಮ

ಸದಾ ರಾಮ ನಾಮ ಜಪಿಸುವ ಬಿಜೆಪಿ ಹರಡುತ್ತಿರುವುದು ನಾಥೂರಾಮ ಗೋಡ್ಸೆಯ ಅಜೆಂಡಾವನ್ನು: ಕನ್ಹಯ್ಯಾ ಕುಮಾರ್

ಬಿಜೆಪಿ ರಾಮನ ಹೆಸರಿನಲ್ಲಿ ಕೋಮುವಾದಿ ಅಜೆಂಡಾವನ್ನು ಹರಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಆರೋಪಿಸಿದ್ದಾರೆ.

ಬಿಜೆಪಿ ರಾಮನ ಹೆಸರನ್ನು ಹೇಳಿಕೊಂಡು ನಾಥೂರಾಂ ಗೋಡ್ಸೆಯ ಕೋಮುವಾದಿ ಅಜೆಂಡಾವನ್ನು ಮುಂದಕ್ಕೆ ಸಾಗಿಸುತ್ತಿದೆ ಮತ್ತು ವಿಭಜನೆಯ ರಾಜಕೀಯ ತಂತ್ರವನ್ನು ಆಡುತ್ತಿದೆ. ಗಾಂಧಿ-ನೆಹರೂ ಕುಟುಂಬದ ಕೊಡುಗೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಹಿಂದೂ ಧರ್ಮದ ಶ್ರೇಷ್ಠತೆಗೆ ಕಳಂಕ ತರುತ್ತಿದೆ

ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಕುಟುಂಬವಾದಕ್ಕಿಂತ ವ್ಯಕ್ತಿವಾದವು ಹೆಚ್ಚು ಅಪಾಯಕಾರಿ, ಇದರಲ್ಲಿ ಒಬ್ಬ ವ್ಯಕ್ತಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ ಎಂದು ಕನ್ಹಯ್ಯಾ ಕುಮಾರ್ ಹೇಳಿದ್ದಾರೆ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಕುಗ್ಗಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಬಿಜೆಪಿಗೆ ಲಾಭವಾಗುತ್ತಿದೆ ಎಂಬ ಪ್ರಶ್ನೆಗೆ, “ಕಾಂಗ್ರೆಸ್‌ಗೆ ಏಕೆ ಆ ಕುರಿತು ತಲೆ ಕೆಡಿಸಿಕೊಳ್ಳಬೇಕು? ದೇಶದಲ್ಲಿ ರಾಮನ ಅಲೆ ಇದ್ದರೆ ತಪ್ಪಿಲ್ಲ ಆದರೆ ನಾಥೂರಾಮನ ಅಲೆಯಿದ್ದರೆ ತಪ್ಪು” ಎಂದು ಹೇಳಿದರು.

ರಾಮನ ಹೆಸರು ಹೇಳಿಕೊಂಡು ನಾಥೂರಾಮ್‌ ಗೋಡ್ಸೆಯ ಕೆಲಸ ಮಾಡುತ್ತಾರೆ

ರಾಮನನ್ನು ನಂಬಿದ ಜನರನ್ನು ವಂಚಿಸುವಲ್ಲಿ ಬಿಜೆಪಿ ನಿರತವಾಗಿದೆ, ಅದಕ್ಕಾಗಿಯೇ ಅವರು ರಾಮನ ಹೆಸರನ್ನು ತೆಗೆದುಕೊಳ್ಳುತ್ತಾರೆ ಆದರೆ ನಾಥುರಾಮ್ ಗೋಡ್ಸೆಯ ಕೆಲಸವನ್ನು ಮಾಡುತ್ತಾರೆ, ಇದು ದೇಶದ ಇತಿಹಾಸ, ಸಂಸ್ಕೃತಿ ಮತ್ತು ಭವಿಷ್ಯದ ವಿರುದ್ಧವಾಗಿದೆ ಎಂದು ಕನ್ಹಯ್ಯಾ ಕುಮಾರ್ ಹೇಳಿದ್ದಾರೆ. ಕನ್ಹಯ್ಯಾ ಕುಮಾರ್, “ರಾಮನನ್ನು ಕೇವಲ ಒಂದು ಸ್ಥಳಕ್ಕೆ ಸೀಮಿತಗೊಳಿಸಲಾಗದು ರಾಮ ಎಲ್ಲೆಡೆಯೂ ಇದ್ದಾನೆ, ಇತರ ಧರ್ಮಗಳಲ್ಲಿ ನಿರ್ದಿಷ್ಟ ಸ್ಥಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ, ಆದರೆ ಹಿಂದೂ ಧರ್ಮದಲ್ಲಿ ಎಲ್ಲಾ ಸ್ಥಳಗಳು ಮತ್ತು ದೇವರುಗಳು ಮುಖ್ಯವಾದವು.” ಎಂದು ಅವರು ಹೇಳಿದರು

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್, “ಪ್ರಸ್ತುತ ಕಾಲದಲ್ಲಿ, ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮವನ್ನು ನಂಬುವ ಜನರಿಗೆ ಮೋಸ ಮಾಡಲಾಗುತ್ತಿದೆ, ರಾಮನ ಹೆಸರು ತ್ರೇತಾಯುಗದಿಂದಲೂ ಇದೆ. ಮುಂದೆ ಬಿಜೆಪಿ ಮುಗಿದು ಹೋದರೂ ರಾಮ ಇರುತ್ತಾನೆ” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page