Friday, December 13, 2024

ಸತ್ಯ | ನ್ಯಾಯ |ಧರ್ಮ

ಸಣ್ಣ ಪಕ್ಷಗಳನ್ನು ಮುಗಿಸುವ ಸಲುವಾಗಿ ಬಿಜೆಪಿ ಒಂದು ದೇಶ, ಒಂದು ಚುನಾವಣೆ ತಂತ್ರ ಬಳಸುತ್ತಿದೆ: ಡಿ ಕೆ ಶಿವಕುಮಾರ್

ಒಂದು ದೇಶ ಒಂದು ಚುನಾವಣೆ ಇದು ಸಣ್ಣ ಪಕ್ಷಗಳನ್ನು ಮುಗಿಸುವ ಯತ್ನ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಜಯಪುರದಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು ನಮ್ಮ ಕಾಂಗ್ರೆಸ್ ‌ ಪಕ್ಷಕ್ಕೆ ಮೂಲ‌ ಸಿದ್ಧಾಂತ ಎನ್ನುವುದು ಇದೆ, ನಮ್ಮ ರಾಷ್ಟ್ರೀಯ ನಾಯಕರು ಈಗಾಗಲೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಇದೆಲ್ಲ ಸಣ್ಣ ಸಣ್ಣ ಪಕ್ಷಗಳನ್ನು ಮುಗಿಸುವ ತಂತ್ರ ಬೇರೆ ಬೇರೆ ರಾಜ್ಯಗಳಲ್ಲಿ ಇವರಿಗೆ (ಬಿಜೆಪಿಯವರಿಗೆ) ಸೀಟು ಬರುತ್ತಿಲ್ಲ, ಹಾಗಾಗಿ ಸಣ್ಣ ಪಕ್ಷಗಳನ್ನು ಮುಗಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಕೆಲವೆಡೆ ಈಗ ಹೊಸದಾಗಿ ಸರ್ಕಾರ ಬಂದಿದೆ, ಕೆಲವೆಡೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ ಅವುಗಳಿಗೆ ಹೇಗೆ ನಿಯಮ ಮಾಡುತ್ತಾರೋ ಗೊತ್ತಿಲ್ಲ. ನನ್ನ ಪ್ರಕಾರದ ಇದು ಕಷ್ಟ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page