Home ರಾಜ್ಯ ಮೈಸೂರು ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡನಿಂದ ಲೋಕಾಯುಕ್ತಕ್ಕೆ ದೂರು

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡನಿಂದ ಲೋಕಾಯುಕ್ತಕ್ಕೆ ದೂರು

0

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್‌ಆರ್ ರಮೇಶ್ ಶನಿವಾರ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ತಮ್ಮ ರಾಜಕೀಯ ಶಕ್ತಿ ಹಾಗೂ ಪ್ರಭಾವ ಬಳಸಿ ಮುಡಾದಿಂದ ಪತ್ನಿಗೆ ಪರ್ಯಾಯ ನಿವೇಶನಗಳನ್ನು ಕೊಡಿಸಿದ್ದಾರೆ ಎಂದು ದೂರಿನಲ್ಲಿ ರಮೇಶ್ ಆರೋಪಿಸಿದ್ದಾರೆ. ಮುಡಾದಲ್ಲಿ ನಡೆದಿದೆ ಎನ್ನಲಾದ ವಿವಿಧ ಘಟನೆಗಳನ್ನು ವಿವರಿಸಿರುವ ದೂರಿನಲ್ಲಿ, ಸಿದ್ದರಾಮಯ್ಯ ಅವರು ಆ ಅವಧಿಯಲ್ಲಿ ರಾಜಕೀಯವಾಗಿ ಪ್ರಬಲರಾಗಿದ್ದು, ಅಧಿಕಾರಿಗಳನ್ನು ಬಳಸಿಕೊಂಡು ಯೋಜಿತ ಹಗರಣವನ್ನು ನಡೆಸಿದ್ದರು ಎಂದು ಉಲ್ಲೇಖಿಸಲಾಗಿದೆ.

ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ, ಅವರ ಸೋದರ ಮಾವ ಬಿಎಂ ಮಲ್ಲಿಕಾರ್ಜುನ ಸ್ವಾಮಿ, ಮುಡಾ ಮಾಜಿ ಅಧ್ಯಕ್ಷ ಬಸವೇಗೌಡ, ಎಚ್‌ವಿ ರಾಜೀವ್ ಮತ್ತು ಕೆಎಎಸ್ ಅಧಿಕಾರಿ ಡಿಬಿ ನರೇಶ್ ಅವರು ಸಿದ್ದರಾಮಯ್ಯನವರ ಅಕ್ರಮಗಳಿಗೆ ಬೆಂಬಲ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಗಳ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ವಂಚನೆ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಗಳನ್ನು ದೂರಿನಲ್ಲಿ ಒಳಗೊಂಡಿದೆ.

ಮಾರಾಟ ಪತ್ರಗಳು ಮತ್ತು ಮುಡಾ ಅಂಗೀಕರಿಸಿದ ನಿರ್ಣಯಗಳಂತಹ ದಾಖಲೆಗಳನ್ನು ಸಹ ಲಗತ್ತಿಸಿರುವ ರಮೇಶ್, ಲೋಕಾಯುಕ್ತರು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದದ್ದಾರೆ.

You cannot copy content of this page

Exit mobile version