Wednesday, June 19, 2024

ಸತ್ಯ | ನ್ಯಾಯ |ಧರ್ಮ

ಹತಾಶೆಯಲ್ಲಿ ದ್ವೇಷ ಕಾರುತ್ತಿರುವ ಬಿಜೆಪಿ ಮುಖಂಡರು

ಮಾಜಿ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್‌ ಅವರು ತಮ್ಮ ಗೃಹಕಛೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದರು. ಗೋಷ್ಟಿಯುದ್ದಕ್ಕೂ ಅವರಾಡಿದ ಮಾತುಗಳು ಕೋಮು ದ್ವೇಷವನ್ನು ಬಿತ್ತುವಂತಿದ್ದವು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿ ಆಡಬಾರದ ಆಟಗಳನ್ನೆಲ್ಲಾ ಆಡಿ ಕುವೆಂಪು, ಬಸವಣ್ಣ, ನಾರಾಯಣ ಗುರು ಮತ್ತು ತಳಸಮುದಾಯಗಳನ್ನು ಅಪಮಾನಿಸುವ ಕೆಲಸ ಮಾಡಿದ್ದ ಬಿ.ಸಿ.ನಾಗೇಶ್ ಗೆ ತಿಪಟೂರಿನ ಮತದಾರರು ಪಾಠ ಕಲಿಸಿದ್ದಾರೆ. ಈಗ ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ಮಾತಾಡುತ್ತಾ ಕೋಮುದ್ವೇಷ ಬಿತ್ತುವ ಮಾತುಗಳನ್ನು ಬಿ ಸಿ ನಾಗೇಶ್ ಆಡಿದ್ದಾರೆ. ಈಗಾಗಲೇ ಫೇಕ್ ನ್ಯೂಸ್ ಎಂದು ಸಾಬೀತಾಗಿರುವ ಸುದ್ದಿಗಳನ್ನೇ ನಿಜ ಎಂಬಂತೆ ಈ ಮಾಜಿ ಸಚಿವರು ಆಡಿರುವುದು ಆರೆಸ್ಸೆಸ್ ಬಿಜೆಪಿಗಳ ದುಷ್ಟತನಕ್ಕೆ ಸಾಕ್ಷಿಯಾಗಿದೆ.

ಮುಸಲ್ಮಾನರ ಮೀಸಲಾತಿಯನ್ನು ತೆಗೆದು  ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿ, ಉರಿಗೌಡ ನಂಜೆಗೌಡ ಸುಳ್ಳು ಪಾತ್ರಗಳನ್ನು ಸೃಷ್ಟಿಸಿ ಸಮುದಾಯಗಳ ನಡುವೆ ಬೆಂಕಿಹಚ್ಚಲು ವಿಫಲರಾದ RSS ವೈದಿಕರು ಸೋಲಿನ ಹತಾಶೆಯಿಂದ ಕರ್ನಾಟಕದಲ್ಲಿ ಗಲಭೆ ಎಬ್ಬಿಸಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಮೀಸಲಾತಿ ಕಿತ್ತುಕೊಂಡರೂ ಸಹಿಸಿಕೊಂಡು ಘನತೆಯಿಂದ ವರ್ತಿಸಿದ ಮುಸಲ್ಮಾನರನ್ನು ಕೆರಳಿಸುವ ವ್ಯರ್ಥ ಪ್ರಯತ್ನವನ್ನು ಪ್ರಜ್ಞಾವಂತ ನಾಗರೀಕರು ಪ್ರಶ್ನಿಸಬೇಕಿದೆ.

ಬಸವಣ್ಣ, ಅಂಬೇಡ್ಕರ್, ಕುವೆಂಪು, ಕೆಂಪೇಗೌಡ, ಕನಕದಾಸ, ವಾಲ್ಮೀಕಿ, ನಾರಾಯಣಗುರು ಮುಂತಾದ ದಾರ್ಶನಿಕರ ಪಠ್ಯವನ್ನು ತಿರುಚಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಕನ್ನಡ ಮಕ್ಕಳ ಪ್ರಜ್ಞೆಗೆ ವಿಷವುಣಿಸಲು ಯತ್ನಿಸಿದ ಕೋಮುಕ್ರಿಮಿ ನಾಗೇಶನಿಂದ ಸೌಹಾರ್ದತೆಯ ಪಾಠವನ್ನು ಕನ್ನಡ ಜನತೆ ಕಲಿಯುವ ಅಗತ್ಯವಿಲ್ಲ.. 

ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ, ಪೊಲೀಸ್ ಇಲಾಖೆಯಿದೆ. ಯಾವ ಸಂಘಟನೆಗಳ ನೈತಿಕ ಪೊಲೀಸ್‌ ಗಿರಿಯ ಅವಶ್ಯಕತೆಯಿಲ್ಲ. ಇನ್ನು ನಿಮಗೆ ಶಕ್ತಿಯಿದ್ದರೆ ಕೊಬ್ಬರಿಗೆ ಕೇಂದ್ರ ಸರ್ಕಾರದಿಂದ ಬರಬೇಕಾದ 20,000 ಬೆಂಬಲ ಬೆಲೆ ಕೊಡಿಸಲಿ. ತಾಕತ್ತಿದೆಯಾ ಬಿಜೆಪಿ ಮುಖಂಡರಿಗೆ? 

ಸೋತಮೇಲೆ ಬೆಂಕಿಯಿಡುವ ಚಿಲ್ಲರೆ ಕೆಲಸ ಬಿಟ್ಟು ಇನ್ನಾದರೂ ಈತ ಜನಾದೇಶವನ್ನು ಗೌರವದಿಂದ ಒಪ್ಪಿಕೊಳ್ಳುವ ಸೌಜನ್ಯ ಕಲಿಯಬೇಕಿದೆ.

ಅಂಕುಶ್, ತುಮಕೂರು

ಇದನ್ನೂ ಓದಿ-  https://peepalmedia.com/v-somanna-loos-becoz-of-mp-prathap-shima/ http://ವಿ. ಸೋಮಣ್ಣ ಸೋಲಿಗೆ ಸಂಸದ ಪ್ರತಾಪ್​ ಸಿಂಹ ಹೇಳಿಕೆಗಳೇ ಕಾರಣ!

Related Articles

ಇತ್ತೀಚಿನ ಸುದ್ದಿಗಳು