Friday, June 14, 2024

ಸತ್ಯ | ನ್ಯಾಯ |ಧರ್ಮ

ಹಿಂದಿ ದಿವಸ್‌ ಆಚರಣೆ : ಮುಂದುವರೆದ ಬಿಜೆಪಿ ಮತ್ತು ಸಿದ್ದರಾಮಯ್ಯ ವಾಕ್‌ಸಮರ

ಬೆಂಗಳೂರು : ಮಾತೃ ಭಾಷೆಯ ಶಿಕ್ಟಣ, ಹಿಂದಿ ದಿವಸ್‌ ಆಚರಿಸುವ ವಿಚಾರವಾಗಿ ಹೆಚ್ಚು ಚರ್ಚೆಯಾಗುತ್ತಿದ್ದು ಬಿಜೆಪಿ ಮತ್ತು ಕಾಂಗ್ರೆಸ್‌ ಪರಸ್ಪರ ಕಿಡಿಕಾರಿದ್ದಾರೆ.

ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ.ಕನ್ನಡ ನಾಡಿನಲ್ಲಿ ಕನ್ನಡಕ್ಕೇ ಮೊದಲ ಪೂಜೆ .ಕೇಂದ್ರ ಸರ್ಕಾರ ಹಿಂದಿ ದಿವಸ ಆಚರಿಸಿ ಹಿಂದಿ ಭಾಷೆಯ ಹೆಸರಿನಲ್ಲಿ ಆರ್‌ ಎಸ್‌ ಎಸ್‌ ಪ್ರಣೀತ ಹಿಂದುತ್ವ ಹೇರುವುದನ್ನು  ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ದ ಟ್ವೀಟ್‌ ಮಾಡುವ ಮುಖಾಂತರ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ  ಬಿಜೆಪಿ ಸಿದ್ದರಾಮಯ್ಯನವರಿಗೆ ಪ್ರಶ್ನಿಸುವುದರ ಮುಖಾಂತರ ಸವಾಲೆಸಗಿದೆ.

ʼಸಿದ್ದರಾಮಯ್ಯನವರೇ, ಮೋದಿ ಸರ್ಕಾರ ಎನ್‌ಇಪಿ ಮೂಲಕ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದೆ. ಆದರೆ ಭಾರತದಲ್ಲಿ  ರಾಷ್ಟ್ರವ್ಯಾಪಿ ಹಿಂದಿ ದಿವಸ, ತ್ರಿಭಾಷಾ ಸೂತ್ರ ಹೇರಿತು.

ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್‌ ರದ್ದು ಮಾಡುತ್ತೇವೆ ಎಂದು ಸೋನಿಯಾ, ರಾಹುಲ್‌ ಗಾಂಧಿ ಅವರಿಂದ ಹೇಳಿಕೆ ಕೊಡಿಸುವ ಧಮ್‌ ಇದೆಯೇ?ʼ ಎಂದು ಪ್ರಶ್ನಿಸಿ ರಾಜ್ಯ ಬಿಜೆಪಿ ಕಿಡಿಕಾರಿದೆ.

Related Articles

ಇತ್ತೀಚಿನ ಸುದ್ದಿಗಳು