Friday, June 21, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ, ಆರ್‌ಎಸ್‌ಎಸ್ ಶಿಕ್ಷಣ ಸಂಸ್ಥೆಗಳನ್ನು ಹೈಜಾಕ್ ಮಾಡಿವೆ: ರಾಹುಲ್ ಗಾಂಧಿ

ಹೊಸದೆಹಲಿ: ಬಿಜೆಪಿ ಮತ್ತು ಆರೆಸ್ಸೆಸ್ ದೇಶದ ಶಿಕ್ಷಣ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿವೆ ಎಂದು ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇವೆರಡೂ ಸೇರಿ ಶಿಕ್ಷಣ ಸಂಸ್ಥೆಗಳನ್ನು ಹೈಜಾಕ್ ಮಾಡಿವೆ ಎಂದು ಅವರು ಹೇಳಿದರು. ದೆಹಲಿಯ ಎಐಸಿಸಿ ಪ್ರಧಾನ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ‘ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ದೇಶದಲ್ಲಿ ತಡೆರಹಿತ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಹಲವು ವಿದ್ಯಾರ್ಥಿಗಳು ದೂರು ನೀಡಿದ್ದರು. ನಿಮಗೆಲ್ಲ ತಿಳಿದಿರುವಂತೆ NEET, UGC NET 2024 ಲೀಕ್ ಆಗಿದೆ.

ಅದರಲ್ಲಿ ಒಂದನ್ನು ಮಾತ್ರ ಕೇಂದ್ರ ರದ್ದುಗೊಳಿಸಿದೆ. ಮೋದಿ ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಿದರು ಎಂದು ಹೇಳಲಾಗುತ್ತದೆ. ಇದು ನಿಜವೋ ಸುಳ್ಳೋ,
ಆದರೆ ಇದೇ ಮೋದಿಗೆ ದೇಶದಲ್ಲಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಹೇಳಿದರು. ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಉದ್ಯೋಗದ ಕೊರತೆಯೂ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಈ ಸರ್ಕಾರ ಭವಿಷ್ಯದ ಪೀಳಿಗೆಯ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದರು. ‘ವ್ಯಾಪಂ ಹಗರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಈಗ ಪ್ರಶ್ನೆಪತ್ರಿಕೆ ಸೋರಿಕೆ ದೇಶಾದ್ಯಂತ ಹರಡಿದೆ. ಶಿಕ್ಷಣ ಸಂಸ್ಥೆಗಳನ್ನು ಹೈಜಾಕ್ ಮಾಡಲಾಗುತ್ತಿದೆ.

ಶಿಕ್ಷಣ ವ್ಯವಸ್ಥೆ ಆರ್‌ಎಸ್‌ಎಸ್ ಕೈಯಲ್ಲಿದೆ. ಮೋದಿ ಶಿಕ್ಷಣದ ಖಾಸಗೀಕರಣವನ್ನು ಇನ್ನಷ್ಟು ಸುಲಭಗೊಳಿಸಿದ್ದಾರೆ. ಅಕ್ರಮಗಳ ತನಿಖೆ ಮುಂದುವರಿದಿದೆ. ಈಗ ಒಂದು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇನ್ನೂ ಏನೆಲ್ಲಾ ರದ್ದಾಗುತ್ತದೆಯೋ ಗೊತ್ತಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದರು.

ಸೋರಿಕೆ ಮತ್ತು ರದ್ದತಿಗೆ ಕಾರಣರಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದರು. ಮುಂಬರುವ ಸಂಸತ್ ಅಧಿವೇಶನಗಳಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆಯೇ..? ಎಂಬ ಪ್ರಶ್ನೆಗೆ ಗಾಂಧಿ, ‘ಹೌದು, ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ’ ಎಂದರು.

Related Articles

ಇತ್ತೀಚಿನ ಸುದ್ದಿಗಳು