Saturday, September 28, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಇಡಿ, ಸಿಬಿಐ ಬಳಸಿ 10 ರಾಜ್ಯ ಸರ್ಕಾರಗಳನ್ನು ಕದ್ದಿದೆ: ಅರವಿಂದ್ ಕೇಜ್ರಿವಾಲ್

ಹೊಸದೆಹಲಿ: ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ 10 ಚುನಾಯಿತ ರಾಜ್ಯ ಸರ್ಕಾರಗಳನ್ನು “ಕದ್ದಿದೆ” ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಆರೋಪಿಸಿದ್ದಾರೆ.

ದೆಹಲಿ ಅಸೆಂಬ್ಲಿಯಲ್ಲಿ ತನಿಖಾ ಸಂಸ್ಥೆಗಳ “ದುರುಪಯೋಗ” ಕುರಿತು ಅಲ್ಪಾವಧಿಯ ಚರ್ಚೆಯಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದರು.

“ಮಾರ್ಚ್ 2016ರಿಂದ ಮಾರ್ಚ್ 2024ರವರೆಗೆ ಪ್ರಧಾನಿ (ನರೇಂದ್ರ) ಮೋದಿ ಅವರು 13 ರಾಜ್ಯ ಸರ್ಕಾರಗಳನ್ನು 15 ಬಾರಿ ಉರುಳಿಸಲು ಪ್ರಯತ್ನಿಸಿದರು. ಅದರಲ್ಲಿ ಅವರು 10 ಸರ್ಕಾರಗಳನ್ನು ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸರ್ಕಾರಗಳನ್ನು ಉರುಳಿಸದ್ದಲ್ಲ, ಈ ಸರ್ಕಾರಗಳನ್ನು ಕದಿಯಲಾಗಿದೆ” ಎಂದು ಅವರು ಆರೋಪಿಸಿದರು.

ಮಹಾರಾಷ್ಟ್ರದ ರಾಜಕಾರಣಿಗಳಾದ ಅಜಿತ್ ಪವಾರ್, ಪ್ರತಾಪ್ ಸರ್ನಾಯಕ್ ಮತ್ತು ಹಸನ್ ಮುಹ್ರಿಫ್ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತದ್ದರು. ಅವರು ತಮ್ಮ ಪಕ್ಷವನ್ನು ಬಿಟ್ಟು ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ ತಕ್ಷಣ ಅವರ ಮೇಲಿನ ಪ್ರಕರಣಗಳನ್ನು ಕೈಬಿಡಲಾಯಿತು ಎಂದು ಕೇಜ್ರಿವಾಲ್ ಆರೋಪಿಸಿದರು.

“ನನಗೆ RSS ಸಂಘ ಪ್ರಚಾರಕರನ್ನು ಕಂಡರೆ ಪಾಪ ಎನ್ನಿಸುತ್ತದೆ. ಪ್ರತಿಯಾಗಿ ಅವರಿಗೆ ಏನೂ ಸಿಗುವುದಿಲ್ಲ” ಎಂದು ಅವರು ಹೇಳಿದರು.

“ಆರ್‌ಎಸ್‌ಎಸ್‌ನವರ ಬಗ್ಗೆ ನನಗೆ ಕರುಣೆ ಇದೆ, ಅವರು ತಮ್ಮ ಇಡೀ ಬದುಕನ್ನು ಆರ್‌ಎಸ್‌ಎಸ್‌ಗೆ ಅರ್ಪಿಸಿದ್ದಾರೆ, ಆದರೆ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಈಗ ಆರ್‌ಎಸ್‌ಎಸ್‌ನವರು ಕೇವಲ ಹೊರಗಿನವರಿಗೆ ರತ್ನಗಂಬಳಿ ಹಾಸುವ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಕೇಜ್ರಿವಾಲ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page