Saturday, March 22, 2025

ಸತ್ಯ | ನ್ಯಾಯ |ಧರ್ಮ

ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಬಿಜೆಪಿ 18 ಶಾಸಕರನ್ನು ಅಮಾನತು ಮಾಡಿದ ಯುಟಿ ಖಾದರ್

ಕಲಾಪದ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ ತಂದಂತ ಆರೋಪದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಆರು ತಿಂಗಳುಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶ ಹೊರಡಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ವಿಧಾನ ಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಖುರ್ಚಿ ಬಳಿ ತೆರಳಿದ ಪ್ರತಿಪಕ್ಷ ಬಿಜೆಪಿ ಶಾಸಕರು ಪ್ರತಿಭಟನೆಗೆ ತೊಡಗಿದರು. ಹನಿ ಟ್ರಾಪ್ ಬಗ್ಗೆಯೇ ಹೆಚ್ಚು ದನಿಯೇರಿಸಿದ ಪ್ರತಿಪಕ್ಷ ನಾಯಕರನ್ನು ಸ್ಪೀಕರ್ ನಾನಾ ರೀತಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದರೂ ಯಾವ ನಾಯಕರೂ ಕೇಳುವ ಗೋಜಿಗೆ ಹೋಗಲಿಲ್ಲ. ಅಷ್ಟೇ ಅಲ್ಲದೆ ಸ್ಪೀಕರ್ ಸ್ಥಾನಕ್ಕೂ ಅಗೌರವ ತೋರುವ ರೀತಿಯಲ್ಲಿ ವರ್ತಿಸಿದ್ದಾರೆ.

ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ಬಿಜೆಪಿಯ ಶಾಸಕರು ನಡೆದುಕೊಂಡಿದ್ದ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪದಿಂದ 6 ತಿಂಗಳವರೆಗೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಮಾಡಿದ್ದಾರೆ. ಅಮಾನತುಗೊಂಡಂತ ಶಾಸಕರಿಗೆ ಟಿಎ, ಡಿಎಗೂ ಬ್ರೇಕ್ ಹಾಕಲಾಗಿದೆ.

ಅಮಾನತುಗೊಂಡ ಬಿಜೆಪಿ ಶಾಸಕರುಗಳು
ದೊಡ್ಡನಗೌಡ ಪಾಟೀಲ್
ಅಶ್ವಥನಾರಾಯಣ
ಎಸ್ ಆರ್ ವಿಶ್ವನಾಥ್
ಬೈರತಿ ಬಸವರಾಜು
ಎಮ್ ಆರ್ ಪಟೇಲ್
ಚನ್ನಬಸಪ್ಪ
ಉಮಾನಾಥ್ ಕೋಟ್ಯನ್
ಸುರೇಶ್ ಗೌಡ
ಶೈಲೇಂದ್ರ ಬೆಲ್ದಾಳೆ
ಶರಣು ಸಲಗಾರ್
ಸಿಕೆ ರಾಮಮೂರ್ತಿ
ಯಶ್ಪಾಲ್ ಸುವರ್ಣ
ಹರಿಶ್ ಬಿ ಪಿ
ಭರತ್ ಶೆಟ್ಟಿ
ಬಸವರಾಜ ಮತ್ತಿಮೂಡ್
ಧೀರಜ್ ಮುನಿರಾಜು
ಮುನಿರತ್ನ
ಚಂದ್ರು ಲಮಾಣಿ

ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶ ಘೋಷಿಸಿದರು. ಪೀಠಕ್ಕೆ ಅಶಿಸ್ತನ್ನು ತೋರಿದವರನ್ನು ಅಮಾನತು ಮಾಡಲಾಗಿದೆ. ನನಗೆ ಅವಮಾನ ಮಾಡಿದರೆ ಸಹಿಸುವೆ. ಆದರೆ ಪೀಠಕ್ಕೆ ಅಗೌರವ ತೋರಿದ್ದನ್ನು ಸಹಿಸಲ್ಲ ಎಂದು ಖಾದರ್ ಅವರು ಪ್ರತಿಪಾದಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page