Friday, July 4, 2025

ಸತ್ಯ | ನ್ಯಾಯ |ಧರ್ಮ

ಆಗಸ್ಟ್ 1ರ ಒಳಗೆ ಒಳಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ: ಸಂಸದ ಗೋವಿಂದ ಕಾರಜೋಳ ಬೆದರಿಕೆ

ಸಿದ್ದರಾಮಯ್ಯ ಸರ್ಕಾರವು ಒಳಮೀಸಲಾತಿ ಜಾರಿ ವಿಷಯದಲ್ಲಿ ಬೇಕೆಂದೇ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

ಆಗಸ್ಟ್‌ 1ನೇ ತಾರೀಖಿನ ಒಳಗೆ ಒಳಮೀಸಲಾತಿ ಜಾರಿಗೊಳಿಸದೆ ಹೋದಲ್ಲಿ ಪಕ್ಷದ ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಕಾರಜೋಳ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಜನಸಂಖ್ಯೆಯ ಡೇಟಾ ಆಧರಿಸಿ ಒಳಮೀಸಲಾತಿಯನ್ನು ರೂಪಿಸಲು ತತ್ಕಾಲೀನ ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿಯೊಂದನ್ನು ಸ್ಥಾಪಿಸಿತ್ತು ಎಂದು ತಿಳಿಸಿದರು.

ಒಳಮೀಸಲಾತಿಗಾಗಿ ನಡೆಸುತ್ತಿರುವ ಸಮೀಕ್ಷೆಯನ್ನು ದುರ್ಬಲ ರೀತಿಯಲ್ಲಿ ಆಯೋಜಿಸಲಾಗಿದೆ ಎಂದು ಆರೋಪಿಸಿದ ಅವರು “ಒಳಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸಬೇಕು, ಇಲ್ಲದೇ ಹೋದರೆ ಆಗಸ್ಟ್‌ 1ರಿಂದ ನಾವು ಹೋರಾಟವನ್ನು ಆರಂಭಿಸುತ್ತೇವೆ” ಎಂದು ಅವರು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಾಮಾಜಿಕ ನ್ಯಾಯದ ವಿಷಯದಲ್ಲಿ ತಮ್ಮ ಬದ್ಧತೆಯನ್ನು ಒಳಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ತೋರಿಸಿಕೊಡಬೇಕು ಎಂದು ಮನವಿ ಮಾಡಿದರು.

ಆಂಧ್ರಪ್ರದೇಶ, ತೆಲಂಗಾಣ ಮತ್ತು ಹರಿಯಾಣದಂತಹ ರಾಜ್ಯಗಳ ಉದಾಹರಣೆಯನ್ನು ತೋರಿಸಿ, ಈ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಆದರೆ, ರಾಜ್ಯ ಸರ್ಕಾರ ಈ ವಿಷಯದಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಇದೊಂದು ಮತಬ್ಯಾಂಕ್‌ ರಾಜಕಾರಣವೇ ಹೊರತು ಇನ್ನೇನೂ ಅಲ್ಲ. ತಮ್ಮ ರಾಜಕಾರಣಕ್ಕಾಗಿ ಸರ್ಕಾರ ದಲಿತರ ಹಕ್ಕುಗಳೊಂದಿಗೆ ಆಟವಾಡುತ್ತಿದೆ ಎಂದು ಸಂಸದ ಆಕ್ರೋಶ ವ್ಯಕ್ತಪಡಿಸಿದರು.


Related Articles

ಇತ್ತೀಚಿನ ಸುದ್ದಿಗಳು

You cannot copy content of this page