ಪ್ರಯಾಗರಾಜ್: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಡ್ಡ ಮತದಾನ ಮಾಡುವಂತೆ ನಮ್ಮ ಸಮಾಜವಾದಿ ಪಕ್ಷದ ಶಾಸಕರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪ ಮಾಡಿದ್ದಾರೆ.
ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರವೇ ಚುನಾವಣೆಗೆ ಇಳಿದಾಗ ಹೀಗಾಗುತ್ತದೆ. ಅವರು ಶಾಸಕರನ್ನು ಬೆದರಿಸಿ ಕರೆದುಕೊಂಡು ಹೋಗುತ್ತಿದ್ದಾರೆ. ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಕೇಸರಿ ಪಕ್ಷ ಗೆಲ್ಲಲು ಯಾವ ಹಂತಕ್ಕೂ ಹೋಗಲಿದೆ ಎಂದು ಆರೊಪಿಸಿದರು.
ಸರ್ಕಾರದ ವಿರುದ್ಧ ನಿಲ್ಲುವ ತಾಕತ್ತು ಎಲ್ಲರಿಗೂ ಇರುವುದಿಲ್ಲ. ಎಲ್ಲರ ಮೇಲೆ ಒತ್ತಡ ಹೇರಲಾಗುತ್ತದೆ. ಚಂಡೀಗಢ ಚುನಾವಣೆಯಲ್ಲೂ ಬಿಜೆಪಿ ಅಪ್ರಾಮಾಣಿಕವಾಗಿತ್ತು. ಯಾವಾಗ ಇದು ಯುಪಿಯಲ್ಲೂ ಮತಗಳನ್ನು ಪಡೆಯಲು ಬಿಜೆಪಿ ಎಲ್ಲವನ್ನೂ ಮಾಡಿದೆ ಎಂದು ಅವರು ದೂರಿದರು.
ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪ್ರತಿಪಕ್ಷ ಸಮಾಜವಾದಿ ಪಕ್ಷದ ಪಾಳಯದಲ್ಲಿ ಅಡ್ಡ ಮತದಾನದ ಕಾಣಿಸಿಕೊಂಡಿದೆ.
ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯ ಸಚೇತಕ ಸ್ಥಾನಕ್ಕೆ ಪಕ್ಷದ ಶಾಸಕ ಮನೋಜ್ ಕುಮಾರ್ ಪಾಂಡೆ ಅವರು ಹಠಾತ್ ರಾಜೀನಾಮೆ ನೀಡಿರುವುದು ಪಕ್ಷದಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ ಎಂಬುದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.