Friday, June 14, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯಿಂದ ಬೆಲೆ ಏರಿಕೆ ತಡೆ ಭರವಸೆ : ಸಿಎಂಗೆ ಸಿದ್ದು ಪ್ರಶ್ನೆ

ಬೆಂಗಳೂರು: ತರಕಾರಿಗಳ ಬೆಲೆ ಏರು-ಪೇರು ಆಗುತ್ತಿರುವ ಹಿನ್ನೆಲೆಯಲ್ಲಿ ನಿಮ್ಮ ಪಕ್ಷಕ್ಕೆ ಒಂದು ದೃಢ ನಿರ್ಧಾರ ಇಲ್ಲವೇ ಎಂದು ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಟೊಮ್ಯಾಟೊ,ಈರುಳ್ಳಿ ಮತ್ತು ಆಲೂಗಡ್ಡೆಗಳ ಬೆಲೆಗಳಲ್ಲಿನ ಏರಿಳಿತಗಳನ್ನು ನಿಭಾಯಿಸಲು ನಿಮ್ಮ ಪಕ್ಷವು “ಟಾಪ್‌ ಪ್ರೈಸ್‌ ಫಂಡ್” ಭರವಸೆ ನೀಡಿದೆ. ಬೆಲೆಯಲ್ಲಿ ಸ್ಥಿರತೆಯನ್ನು ತರಲು ಮತ್ತು ರೈತರಿಗೆ ಪರ ನಿಲ್ಲಲು ನಿಮ್ಮ ಬಿಜೆಪಿ ಸರ್ಕಾರ ವಿಫಲವಾಗಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಟ್ವೀಟ್‌ ಮಾಡುವ ಮುಖಾಂತರ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ಧರಾಮಯ್ಯ ಅವರು ಪ್ರತಿ ವಾರ್ಡ್‌ ಗಳಲ್ಲಿ ಆಯುಷ್ಮಾನ್‌ ಕ್ಲಿನಿಕ್‌ ಗಳ ಸ್ಥಾಪನೆಯ ಭರವಸೆ ಏನಾಯಿತು? ಬೆಂಗಳೂರಿನ ನಾಗರಿಕರು ಇನ್ನೂ ಈ ಕ್ಲಿನಿಕ್‌ ಗಳ ಸ್ಥಾಪನೆಗೆ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು