Wednesday, December 11, 2024

ಸತ್ಯ | ನ್ಯಾಯ |ಧರ್ಮ

‘ಬಿಜೆಪಿ ನಮ್ಮ ವರದಿಯನ್ನು ಬಳಸಿ ಸುಳ್ಳು ಸುದ್ದಿ ಹರಡಿಸಿದೆʼ- ಫ್ರೆಂಚ್ ಮಾಧ್ಯಮ ಮೀಡಿಯಾಪಾರ್ಟ್ ಖಂಡನೆ

ಬೆಂಗಳೂರು: ಫ್ರೆಂಚ್ ತನಿಖಾ ಮಾಧ್ಯಮವಾಗಿರುವ ಮೀಡಿಯಾಪಾರ್ಟ್ ಬಿಜೆಪಿ ತನ್ನ ವರದಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖಂಡಿಸಿ, ಭಾರತದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್ , ಅಮೆರಿಕದ ಕೋಟ್ಯಾದೀಶ ಜಾರ್ಜ್ ಸೊರೊಸ್ ಮತ್ತು ಭಾರತದ ವಿರೋಧ ಪಕ್ಷಗಳು ಪಿತೂರಿ ನಡೆಸುತ್ತಿವೆ ಎಂದು ಬಿಜೆಪಿ ಮಾಡಿರುವ ಆರೋಪಗಳಿಗೆ ಪೂರಕವಾಗಿರುವ ಯಾವುದೇ “ಸಾಕ್ಷ್ಯಗಳು ಇಲ್ಲ” ಇಲ್ಲ ಎಂದು ಹೇಳಿದೆ.

ಬಿಜೆಪಿಯು ಸಂಸತ್ತಿನಲ್ಲಿ ಮತ್ತು ಅದರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ, ಮತ್ತೊಂದು ತನಿಖಾ ಮಾಧ್ಯಮ ನೆಟ್‌ವರ್ಕ್, ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯಲ್ಲಿ (OCCRP – Organized Crime and Corruption Reporting Project) ಮೀಡಿಯಾಪಾರ್ಟ್‌ನ ವರದಿಯನ್ನು ಉಲ್ಲೇಖಿಸಿ, ಸೊರೊಸ್ ಮತ್ತು ಅಮೇರಿಕಾದ ಸ್ಟೇಟ್‌ ಡಿಪಾರ್ಟ್‌ಮೆಂಟಿನ ಬೆಂಬಲದೊಂದಿಗೆ ಕಾಂಗ್ರೆಸ್ ಹಾಗೂ ಆ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿತ್ತು.

” ಬಿಜೆಪಿಯು ತನ್ನ ರಾಜಕೀಯ ತಂತ್ರವನ್ನು ಕಾರ್ಯರೂಪಕ್ಕೆ ತರಲು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಒಸಿಸಿಆರ್‌ಪಿ ಕುರಿತು ಇತ್ತೀಚೆಗೆ ಪ್ರಕಟಿಸಿದ ತನಿಖಾ ಲೇಖನವನ್ನು ಮೀಡಿಯಾಪಾರ್ಟ್ ಖಂಡಿಸುತ್ತದೆ,” ಎಂದು ಮೀಡಿಯಾಪಾರ್ಟ್‌ನ ಪ್ರಕಾಶಕರು ಮತ್ತು ನಿರ್ದೇಶಕಿ ಕ್ಯಾರಿನ್ ಫೌಟೊ ಡಿಸೆಂಬರ್ 7 ರಂದು ಹೇಳಿದರು. 

” ನಾವು ಎಂದಿಗೂ ಪ್ರಕಟಿಸದ ನಕಲಿ ಸುದ್ದಿಗಳನ್ನು ಹರಡಲು ಬಿಜೆಪಿಯು ಮೀಡಿಯಾಪಾರ್ಟ್‌ನ ಲೇಖನ ಎಂದು ತಪ್ಪಾಗಿ ಬಳಸಿಕೊಂಡಿದೆ,” ಎಂದು ಅವರು ಆರೋಪಿಸಿದರು.

“ಬಿಜೆಪಿಯು ಪ್ರಚಾರ ಮಾಡುವ ಪಿತೂರಿ ಸಿದ್ಧಾಂತವನ್ನು ಬೆಂಬಲಿಸುವ ಯಾವುದೇ ಸತ್ಯ ಸಾಕ್ಷಿಗಳು ಲಭ್ಯವಿಲ್ಲ,” ಎಂದಿರುವ ಮೀಡಿಯಾಪಾರ್ಟ್‌ನ ಪ್ರಕಾಶಕರು ಹೇಳಿದರು, “ಭಾರತದಲ್ಲಿ ವರದಿ ಮಾಡುವ ಮತ್ತು ತನಿಖೆ ಮಾಡುವ ಧೈರ್ಯಶಾಲಿ ಭಾರತೀಯ ಮತ್ತು ಅಂತರರಾಷ್ಟ್ರೀಯ ಪತ್ರಕರ್ತರಿಗೆ ಸಂಪೂರ್ಣ ಬೆಂಬಲವನ್ನು” ವ್ಯಕ್ತಪಡಿಸಿದ್ದಾರೆ.

ಗುರುವಾರ, ಬಿಜೆಪಿ ಶಾಸಕರು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಲು ಮೀಡಿಯಾಪಾರ್ಟ್ ವರದಿಯನ್ನು ಉಲ್ಲೇಖಿಸಿ, ಅವರು ಒಸಿಸಿಆರ್‌ಪಿ ಮತ್ತು ಯುಎಸ್ ಬಿಲಿಯನೇರ್ ಸೊರೊಸ್ ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.

ಸಾರ್ವಜನಿಕ ದಾಖಲೆಗಳ ಪ್ರಕಾರ USAID ಯು (U.S. Agency for International Development) OCCRP ಗೆ ಗಣನೀಯ ಪ್ರಮಾಣದ ಹಣವನ್ನು ನೀಡಿದ್ದರಿಂದ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್ ರಾಜ್ಯ ಪಿತೂರಿಯ ಭಾಗವಾಗಿದೆ ಎಂದು ನೇರವಾಗಿ ಆರೋಪಿಸಿ ಬಿಜೆಪಿ X ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿತ್ತು. ಬಿಜೆಪಿ ಸಂಸದ ಸಂಬಿತ್ ಪಾತ್ರ ಗುರುವಾರದ ಪತ್ರಿಕಾಗೋಷ್ಠಿಯಲ್ಲಿಯೂ ಈ ಆರೋಪಗಳನ್ನು ಮಾಡಿದ್ದರು.

ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಶನಿವಾರ ಹೇಳಿಕೆಯನ್ನು ನೀಡಿದ್ದು , “ಭಾರತದಲ್ಲಿ ಆಡಳಿತ ಪಕ್ಷವು ಈ ರೀತಿಯ ಆರೋಪಗಳನ್ನು ಮಾಡುತ್ತಿರುವುದು ನಿರಾಶಾದಾಯಕವಾಗಿದೆ” ಎಂದು ಹೇಳಿದೆ.

ಇದು ಮೀಡಿಯಾಪಾರ್ಟ್‌ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಈ ಕಿತ್ತಾಟ ಇದೇ ಮೊದಲೇನಲ್ಲ. 2018 ರಲ್ಲಿ ಈ ಫ್ರೆಂಚ್ ಮಾಧ್ಯಮವು ಭಾರತ ಖರೀದಿಸದ 36 ರಫೇಲ್ ಫೈಟರ್ ಜೆಟ್‌ಗಳಲ್ಲಿ ಆಗಿರುವ ಭ್ರಷ್ಟಾಚಾರದ ವಿಶೇಷ ತನಿಖಾ ವರದಿಗಳ ಸರಣಿಯನ್ನು ಪ್ರಕಟಿಸಿತ್ತು. ಆ ಸಮಯದಲ್ಲಿ, ಭಾರತ ಸರ್ಕಾರ ಮತ್ತು ಬಿಜೆಪಿ ರಫೇಲ್‌ ಹಗರಣದ ಆರೋಪಗಳನ್ನು ತಳ್ಳಿಹಾಕಿತು.

2023 ಡಿಸೆಂಬರ್ ನಲ್ಲಿ ಪ್ರಕಟವಾದ ರಫೇಲ್ ಒಪ್ಪಂದದ ಇತ್ತೀಚಿನ ವರದಿಯಲ್ಲಿ , ಭ್ರಷ್ಟಾಚಾರ ಆರೋಪಗಳ ಬಗ್ಗೆ ಫ್ರೆಂಚ್ ನ್ಯಾಯಾಂಗ ತನಿಖೆಗೆ ಭಾರತ ಅಡ್ಡಿಪಡಿಸುತ್ತಿದೆ ಎಂದು ಮೀಡಿಯಾಪಾರ್ಟ್ ಆರೋಪಿಸಿತ್ತು. “ಇದು ಈಗ ಸ್ಥಾಪಿತ ಸತ್ಯ: ಭಾರತಕ್ಕೆ 36 ಡಸ್ಸಾಲ್ಟ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳ ಮಾರಾಟಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣವನ್ನು ಎಷ್ಟೇ ಖರ್ಚುಮಾಡಿಯಾದರೂ ಮುಚ್ಚಿಹಾಕಲು ಅಲ್ಟ್ರಾ-ರಾಷ್ಟ್ರೀಯವಾದಿ ಪ್ರಧಾನಿ ನರೇಂದ್ರ ಮೋದಿಯವರ ಭಾರತ ಸರ್ಕಾರ ಉತ್ಸುಕವಾಗಿದೆ” ಎಂದು ಈ ಮಾಧ್ಯಮ ಬರೆದಿತ್ತು.

ಆಮ್‌ಸ್ಟರ್‌ಡ್ಯಾಮ್-ಆಧಾರಿತ OCCRP ಕುರಿತು ಮೀಡಿಯಾಪಾರ್ಟ್‌ನ ಇತ್ತೀಚಿನ ತನಿಖೆಯು ಹೆಚ್ಚಾಗಿ ಸಾರ್ವಜನಿಕ ದಾಖಲೆಗಳ ಮೇಲೆ ಅವಲಂಬಿತವಾಗಿದೆ ಮತ್ತು OCCRP ಸಂಸ್ಥಾಪಕ ಡ್ರೂ ಸುಲ್ಲಿವಾನ್ ಮತ್ತು ಹಲವಾರು ಹಿರಿಯ US ಅಧಿಕಾರಿಗಳು ಜರ್ಮನ್ ಬ್ರಾಡ್‌ಕಾಸ್ಟರ್ NDR ಗೆ ನೀಡಿದ ಸಂದರ್ಶನಗಳನ್ನೂ ಚಿತ್ರೀಕರಿಸಲಾಗಿದೆ.

ಮೀಡಿಯಾಪಾರ್ಟ್ ವರದಿಯು “OCCRP ಅನೇಕ ಅಮೇರಿಕನ್ ಸರ್ಕಾರದ ದೇಣಿಗೆಗಳನ್ನು ಸ್ವೀಕರಿಸಿದೆ, ಅದು ವಾಷಿಂಗ್ಟನ್ ಆದ್ಯತೆಯ ವಿಷಯವೆಂದು ಪರಿಗಣಿಸುವ ಕೆಲವು ದೇಶಗಳ ತನಿಖೆಗಳಿಗೆ ಖರ್ಚು ಮಾಡಲು ನಿರ್ಬಂಧವನ್ನು ಹೊಂದಿದೆ” ಎಂದು ಹೈಲೈಟ್ ಮಾಡಿತ್ತು .

ಇದು ರಷ್ಯಾ, ವೆನೆಜುವೆಲಾ, ಮಾಲ್ಟಾ ಮತ್ತು ಸೈಪ್ರಸ್‌ನಲ್ಲಿ ತೆರಿಗೆ ಸ್ವರ್ಗಗಳು ಮತ್ತು ಮೆಕ್ಸಿಕೋದಲ್ಲಿನ ಡ್ರಗ್ ಕಾರ್ಟೆಲ್‌ಗಳ ಮೇಲೆ ಕೇಂದ್ರೀಕರಿಸಿದ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಧನಸಹಾಯ ಪಡೆದ ಯೋಜನೆಗಳನ್ನು ವಿವರಿಸಿದೆ. ಹಾಗೆಯೇ, ಮೀಡಿಯಾಪಾರ್ಟ್‌ನ ತನಿಖೆಯು ಯಾವುದೇ OCCRP ವರದಿಯಲ್ಲಿ ಭಾರತವನ್ನು ಗುರಿಯಾಗಿಸುವ ಯಾವುದೇ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಅನುದಾನದ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ.

ಮೀಡಿಯಾಪಾರ್ಟ್‌ನ ಲೇಖನದ ಪ್ರಕಟಣೆಯ ನಂತರ OCCRP ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯನ್ನು ನೀಡಿde. ತಮ್ಮ ಈ ವರದಿಯು ದಾನಿಗಳ ಹಣದಿಂದ ಪ್ರಭಾವಕ್ಕೆ ಒಳಗಾಗಿದೆ ಎಂಬ ಆರೋಪವನ್ನು ಒಂದು ಸುಳ್ಳು ಆರೋಪ ಎಂದಿದೆ. “OCCRP ತನ್ನ ಪತ್ರಿಕೋದ್ಯಮದ ಮೇಲೆ ಯಾವುದೇ ಮಿತಿಗಳನ್ನು ಹೊಂದಿಲ್ಲ ಮತ್ತು ಯಾವುದೇ ದಾನಿಯು ನಮ್ಮ ವರದಿಯ ಮೇಲೆ ಪ್ರಭಾವ ಬೀರುವುದಿಲ್ಲ” ಎಂದು ಮಾಧ್ಯಮ ಸಂಸ್ಥೆ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page