Monday, June 24, 2024

ಸತ್ಯ | ನ್ಯಾಯ |ಧರ್ಮ

ಲವ್, ಸೆಕ್ಸ್, ಧೋಖಾ..! : ಶಿವಮೊಗ್ಗ ಬಿಜೆಪಿ ಯುವಮೋರ್ಚಾ ಮುಖಂಡ ಅರುಣ್ ಕುಗ್ವೆ ಅರೆಸ್ಟ್

ಯುವತಿಯೊಬ್ಬಳಿಗೆ ಮದುವೆ ಆಗುವುದಾಗಿ ಪ್ರೀತಿಸಿ ಒತ್ತಾಯಪೂರ್ವಕ ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೇ ಇಡೀ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮುಖಂಡ ಅರುಣ್ ಕುಗ್ವೆಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, FIR ದಾಖಲಿಸಿ ಆರೋಪಿ ಬಿಜೆಪಿ ಮುಖಂಡ ಅರುಣ್ ಕುಗ್ವೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅರುಣ್ ಕುಗ್ವೆ, ಮಾಜಿ ಶಾಸಕ ಹರತಾಳು ಹಾಲಪ್ಪ, ಸಂಸದ ಬಿವೈ ರಾಘವೇಂದ್ರರ ನಿಕಟ ಸಂಪರ್ಕದಲ್ಲಿ ಇರುವವನು ಎಂದು ತಿಳಿದು ಬಂದಿದೆ.

ಸಂತ್ರಸ್ತ ಯುವತಿಯ ಹೊರತಾಗಿ ಬೇರೊಬ್ಬ ಯುವತಿಯೊಂದಿಗೆ ಆರೋಪಿ ಅರುಣ್ ಕುಗ್ವೆ ನಿಶ್ಚಿತಾರ್ಥ ನಡೆಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ನೀಡಿದ ದೂರಿನ ಅನ್ವಯ, FIR ದಾಖಲಿಸಿದ ಪೊಲೀಸರು, ಆರೋಪಿ ಅರುಣ್ ಕುಗ್ವೆ ಮತ್ತು ಗಣೇಶ್ ಎಂಬಾತನ ಮೇಲೆ ಭಾರತೀಯ ದಂಡ ಸಂಹಿತೆ 354, 376 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ.

ಆರೋಪಿ ಅರುಣ್ ಕುಗ್ವೆ, ಸಂತ್ರಸ್ತ ಯುವತಿಯನ್ನು ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿಸುವುದಾಗಿ ನಂಬಿಸಿ, ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡರುತ್ತಾನೆ. ಯುವತಿಯ ಒಪ್ಪಿಗೆ ಇಲ್ಲದೆಯೂ ಬಲಾತ್ಕಾರದಿಂದ ಆಕೆಯ ಜೊತೆಗೆ ಫೋಟೋ, ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಮಾನಹಾನಿ ಮಾಡಲಾಗಿದೆ ಎಂದು ಯುವತಿ ದಾಖಲಿಸಿದ ದೂರಿನಲ್ಲಿ ತಿಳಿದು ಬಂದಿದೆ.

ಇನ್ನು ಅರುಣ್ ಕುಗ್ವೆ ಮೇಲೆ ಹಲವು ಅಪರಾಧ ಪ್ರಕರಣ ಗಳು ಇದ್ದು, ಯುವತಿಗೆ ಆತನ ರೌಡಿ ಎಲಿಮೆಂಟ್ ಗಳ ಬಗ್ಗೆ ತಡವಾಗಿ ಮನವರಿಕೆಯಾಗಿದೆ. ಅಷ್ಟೇ ಅಲ್ಲದೇ ಈಗಾಗಲೇ ಆತನ ಮೇಲೆ ಗಡಿಪಾರು ಸೂಚನೆ ಕೂಡ ಪೊಲೀಸ್ ಇಲಾಖೆ ನೀಡಿದ್ದು ಪ್ರಕರಣದ ಗಂಭೀರತೆಯ ಮೇಲೆ ಆತನ ಬಂಧಿಸಿ ವಿಚಾರಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

Related Articles

ಇತ್ತೀಚಿನ ಸುದ್ದಿಗಳು