ಬಿಜೆಪಿಯ ಮೂಲಸೌಕರ್ಯದ ಗುಣಮಟ್ಟ ಮಳೆ ಬಂದಾಗ ಎದ್ದು ಕಾಣುತ್ತಿದೆ: ಡಿ.ಕೆ.ಶಿ

ಬೆಂಗಳೂರು: ಸಂಚಾರ ತಜ್ಞರ ಸಮಿತಿಯಡಿ ಸಮಗ್ರ ಮೂಲಸೌಕರ್ಯ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂಬ ರಾಜ್ಯ ಸರ್ಕಾರದ ಹೇಳಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದಾರೆ

ಬೆಂಗಳೂರಿನಲ್ಲಿ ಮೂಲಸೌಕರ್ಯದ ಗುಣಮಟ್ಟ ಮಳೆ ಬಂದಾಗ ಎದ್ದು ಕಾಣುತ್ತಿದೆ. ಹೀಗಾಗಿ ಸಮಗ್ರ ಕ್ರಿಯಾಯೋಜನೆಯ ಬಗ್ಗೆ ಬಿಜೆಪಿ ಆಡಿದ ಮಾತುಗಳು ಏನಾದವು? ಹೇಳಿ, ನಿಮ್ಮ ಬಳಿ ಉತ್ತರ ಇದೆಯಾ? ಎಂದು ಡಿ.ಕೆ.ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼಸಂಚಾರ ತಜ್ಞರ ಸಮಿತಿಯ ಅಡಿಯಲ್ಲಿ ಸಮಗ್ರ ಮೂಲಸೌಕರ್ಯ ಕ್ರಿಯಾ ಯೋಜನೆ ರೂಪಿಸಲಾಗುವುದುʼ ಎಂದು ಭರವಸೆ ನೀಡಿದ್ದೀರಿ, ತಮ್ಮ ಪ್ರಣಾಳಿಕೆಯಲ್ಲಿದ್ದ ಈ ಸಂಗತಿ ಬಿಜೆಪಿ ಸರ್ಕಾರಕ್ಕೆ ನೆನಪಿದೆಯೇ? ರಸ್ತೆಗಳು ಗುಂಡಿಮಯವಾಗಿವೆ, ಹಲವು ಜೀವಗಳು ಬಲಿಯಾಗಿವೆ, ಹೈಕೋರ್ಟ್ ಛೀಮಾರಿ ಹಾಕುತ್ತಿದೆ. ಹೀಗಿದ್ದೂ ತಾವು ಕೊಟ್ಟ ಭರವಸೆ ಮರೆತಿದ್ದೇಕೆ? ಎಂದು ರಾಜ್ಯ ಕಾಂಗ್ರೆಸ್‌ ಘಟಕ ಪ್ರಶ್ನಿಸಿದೆ.

Related Articles

ಇತ್ತೀಚಿನ ಸುದ್ದಿಗಳು