ಬಿಜೆಪಿಯ ನೂತನ ಸಂಸದೀಯ ಮಂಡಳಿ  ಘೋಷಣೆ: ಯಡಿಯೂರಪ್ಪಒಳಗೆ, ಗಡ್ಕರಿ ಹೊರಗೆ

ನವದೆಹಲಿ : ಬಿಜೆಪಿಯ ನೂತನ ಸಂಸದೀಯ ಮಂಡಳಿ ಘೋಷಣೆಯಾಗಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ  ಬಿ ಎಸ್‌ ಯಡಿಯೂರಪ್ಪ ಅವರನ್ನು ಮಂಡಳಿಗೆ ಸೇರ್ಪಡೆಗೊಳಿಸಲಾಗಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೈ ಬಿಡಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೆಂದ್ರ ಮೋದಿ, ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ,ಕೆ ಲಕ್ಷ್ಮಣ್‌, ಬಿ.ಎಲ್‌ ಸಂತೋಷ್ ಸೇರಿದಂತೆ ಒಟ್ಟು 11 ಸದಸ್ಯರನ್ನು ಮಂಡಳಿಯು ಒಳಗೊಂಡಿದೆ.

ಸರ್ಬಾನಂದ ಸೊನೊವಾಲ್ ಮತ್ತು ಯಡಿಯೂರಪ್ಪ ಅವರನ್ನು ಮಂಡಳಿಯ ಒಳ ತರಲಾಗಿದೆ. ನಿತಿನ್‌ ಗಡ್ಕರಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಅವರನ್ನು ಕೈಬಿಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು