Home ಅಪರಾಧ ಲೈಂಗಿಕ ಕ್ರಿಯೆಯಲ್ಲಿ ರಕ್ತಸ್ರಾವ ; ಯುವತಿ ಸಾವು : ಪ್ರಿಯಕರ ಪೊಲೀಸ್ ಕಸ್ಟಡಿಗೆ

ಲೈಂಗಿಕ ಕ್ರಿಯೆಯಲ್ಲಿ ರಕ್ತಸ್ರಾವ ; ಯುವತಿ ಸಾವು : ಪ್ರಿಯಕರ ಪೊಲೀಸ್ ಕಸ್ಟಡಿಗೆ

0

23 ವರ್ಷದ ಯುವತಿಯೊಬ್ಬಳು ಲೈಂಗಿಕ ಸಂಪರ್ಕದ ನಂತರ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ ಪ್ರಕರಣ ಗುಜರಾತ್ ನಲ್ಲಿ ನಡೆದಿದೆ. ಪ್ರಕರಣದ ನಂತರ ಆಕೆಯ ಪ್ರಿಯಕರನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ತನ್ನ ಸಂಗಾತಿಯೊಂದಿಗೆ ಏಕಾಂತದಲ್ಲಿ ಕಾಲ ಕಳೆಯಲು ಪ್ರಿಯಕರನೊಂದಿಗೆ ಹೊಟೇಲ್‌ಗೆ ತೆರಳಿದ ನಂತರ ಈ ಅವಘಡ ಸಂಭವಿಸಿದೆ. ಲೈಂಗಿಕ ಸಂಪರ್ಕದ ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವತಿಗೆ ಚಿಕಿತ್ಸೆ ಕೊಡಿಸಲು ಪ್ರಿಯಕರ ವಿಳಂಬ ಮಾಡಿದ ಕಾರಣಕ್ಕೆ ಯುವತಿ ಸಾವನ್ನಪ್ಪಿದ್ದಾರೆ.

ಒಂದೆಡೆ ಯುವತಿ ರಕ್ತಸ್ರಾವದಿಂದ ನರಳುತ್ತಿದ್ದರೆ, ಗೆಳೆಯ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ಗೆ ಕರೆ ಮಾಡದೆ ತಾನೇ ಸ್ವಯಂ ಚಿಕಿತ್ಸೆ ನೀಡಲು ಯತ್ನಿಸಿದ್ದಾನೆ. ಚಿಕಿತ್ಸೆಯ ವಿವರಗಳಿಗಾಗಿ ಗಂಟೆಗಟ್ಟಲೆ ಅಂತರ್ಜಾಲದಲ್ಲಿ ಹುಡುಕಿದ್ದಾನೆ. ಇದರಿಂದ ಯುವತಿ ಸಕಾಲದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಯುವತಿಗೆ ರಕ್ತಸ್ರಾವ ಆಗುತ್ತಿದ್ದ ಹಾಗೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರೆ ಯುವತಿ ಪ್ರಾಣ ಉಳಿಸಬಹುದಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಯುವತಿ ಸಾವಿಗೆ ಪ್ರಿಯಕರನೇ ಕಾರಣ ಎಂದು ಪೊಲೀಸರು ಯುವಕನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಗುಜರಾತ್ ನ ನವಸಾರಿ ಜಿಲ್ಲೆಯ ನರ್ಸಿಂಗ್ ವಿದ್ಯಾರ್ಥಿಯೊಬ್ಬಳು ಮೂರು ವರ್ಷಗಳ ಹಿಂದೆ ಯುವಕನೊಬ್ಬನನ್ನು ಭೇಟಿಯಾಗಿದ್ದಾಳೆ. ಹೀಗೆ ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಿದೆ. ಬಳಿಕ ಕಾರಣಾಂತರಗಳಿಂದ ಇಬ್ಬರೂ ದೂರವಾಗಿದ್ದಾರೆ. ಆದರೆ ಇತ್ತೀಚೆಗೆ ಎರಡು ವರ್ಷಗಳ ನಂತರ ಮತ್ತೆ ಭೇಟಿಯಾಗಿದ್ದಾರೆ. ಹೀಗಾಗಿ ತಿಂಗಳ ಕೊನೆಯಲ್ಲಿ ಒಟ್ಟಿಗೆ ಕಳೆಯಲು ಇಬ್ಬರೂ ನವಸಾರಿಯ ಹೋಟೆಲ್‌ಗೆ ಹೋಗಿದ್ದಾರೆ. ಅಲ್ಲಿ ಅನ್ಯೋನ್ಯವಾಗಿದ್ದಾಗ ಯುವತಿಗೆ ರಕ್ತಸ್ರಾವವಾಗಿದೆ. ಆಕೆಯ ಗೆಳೆಯ ರಕ್ತಸ್ರಾವವನ್ನು ನಿಲ್ಲಿಸಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾನೆ.ಪ್ರಯತ್ನಗಳು ಫಲಕಾರಿಯಾಗದೇ ಯುವತಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ.ಇದರಿಂದ ಗಾಬರಿಗೊಂಡ ಯುವಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಿಸಿದ್ದಾನೆ.

ಅದಾಗಲೇ ಯುವತಿ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ .ನವಸಾರಿ ಜಿಲ್ಲೆಯ ಜಲಾಲ್‌ಪೋರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಯುವತಿಯ ಖಾಸಗಿ ಭಾಗಗಳಲ್ಲಿ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದ್ದು, ಆಘಾತದಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. 

You cannot copy content of this page

Exit mobile version