ರೆಡ್ ಕ್ರಾಸ್ ಯುವ ಘಟಕ ಮತ್ತು ಎನ್ ಸಿ ಸಿ ಸಹಯೋಗದ ರಕ್ತ ದಾನ ಶಿಬಿರದಲ್ಲಿ 300 ಯೂನಿಟ್ ರಕ್ತ ದಾನ!

ಬೆಂಗಳೂರು: ನಗರದ ಸರ್ಕಾರಿ ರಾಮ್ ನಾರಾಯಣ್ ಚೆಲ್ಲರಾಮ್ ಕಾಲೇಜು ಬೆಂಗಳೂರಿನ ವಿದ್ಯಾರ್ಥಿಗಳು ರೆಡ್‌ ಕ್ರಾಸ್‌ ಯುವ ಘಟಕ ಹಾಗೂ ಎನ್‌ಸಿಸಿ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು.

ಶಿಬಿರದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಒಟ್ಟು 300 ಯೂನಿಟ್‌ ರಕ್ತವನ್ನು ಅಂದು ಕೊಡುಗೆಯಾಗಿ ನೀಡಿದ್ದಾರೆ.

I Love Donating Blood ಎಂಬ ವಿಶೇಷ ಸಂದೇಶದೊಂದಿಗೆ ಆಯೋಜಿಸಲ್ಪಟ್ಟಿದ್ದ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಮೂರನೇ ಕರ್ನಾಟಕ ಎನ್ ಸಿ ಸಿ ಬ್ಯಾಟಲಿಯನ್, ಸಂಕಲ್ಪ ಫೌಂಡೇಶನ್, ಶಂಕರ ಪಾರ್ಕ್ ರೋಟರಿ ಕ್ಲಬ್ ಮತ್ತು HDFC ನೆರವು ಸಿಕ್ಕಿದ್ದು, ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕವೃಂದದವರ ಪ್ರೇರಣೆಯಿಂದ ರಕ್ತದಾನ ಶಿಬಿರ ಅದ್ಭುತ ಯಶಸ್ಸು ಕಂಡಿತು.

Related Articles

ಇತ್ತೀಚಿನ ಸುದ್ದಿಗಳು