ಬೆಂಗಳೂರು: 2022ರ ನಂತರ ಭಾರತಕ್ಕೆ ಮತ್ತೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದ್ದು, ಅದರಲ್ಲೂ ಈ ಬಾರಿ ಕನ್ನಡದ ಹೆಮ್ಮಯ ಲೇಖಕಿ ಬಾನು ಮುಷ್ತಾಕ್ ಅವರು ಪ್ರಶಸ್ತಿಯನ್ನ ತಮ್ಮ ಮಡಿಲಿಗೇರಿಸಿಕೊಂಡ ಹಿನ್ನಲೆಯಲ್ಲಿ, ಇವರಿಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿನಂದನೆಯನ್ನ ತಿಳಿಸಿದ್ದಾರೆ.
ಈ ಕುರಿತು ತಮ್ಮ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿದ್ದು, ಕನ್ನಡ ಸಾಹಿತ್ಯದ ಗರಿಮೆಯನ್ನು ಬಾನೆತ್ತರಕ್ಕೇರಿಸಿದ್ದೀರಿ, ನಿಮ್ಮ “ಹಾರ್ಟ್ ಲ್ಯಾಂಪ್” ಸಣ್ಣ ಕಥೆಗಳ ಸಂಕಲನವು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನವಾಗಿರುವುದು ಹೆಮ್ಮೆಯ ವಿಚಾರ ಎಂದು ಬಾನು ಮುಷ್ತಾಕ್ ಅವರನ್ನ ಹೋಗಳಿದ್ದಾರೆ.
ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ ಎಂದು ಸಂತೋಷ ವ್ಯಕ್ತಪಡಿಸಿರುವ ಅವರು, ಬಾನು ಮುಷ್ತಾಕ್ ಹಾಗೂ ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಾ ಭಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.
ಜೊತೆಗೆ ಇನ್ನಷ್ಟು ಉತ್ತಮ ಕೃತಿಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ, ಸಾಹಿತ್ಯ ಸೇವೆಯು ಜಗದಗಲ ಹೆಸರು ಮಾಡಲಿ ಎಂದು ಡಿ. ಕೆ. ಶಿವಕುಮಾರ್ ಅವರು ಶುಭಹಾರೈಸಿದ್ದಾರೆ.