ಹಿಜಾಬ್‌-ಪಲ್ಲು ಎರಡೂ ಒಂದೇ: ಸಿಎಮ್‌ ಇಬ್ರಾಹಿಂ

ವಿವಾಹಿತ ಮಹಿಳೆಯರು ಧರಿಸುವ ಪಲ್ಲು (ತಲೆಯ ಮೇಲೆ ಧರಿಸುವ ಸೆರಗಿನ ತುದಿ) ಮತ್ತು ಹಿಜಾಬ್‌ ಎರಡೂ ಒಂದೇ, ಮತ್ತು ಪಲ್ಲುವನ್ನು ರಾಷ್ಟ್ರಪತಿಯವರೂ ಧರಿಸುತ್ತಾರೆ ಎಂದು ಸಿ ಎಮ್‌ ಇಬ್ರಾಹಿಂ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಸಿ ಎಮ್‌ ಇಬ್ರಾಹಿಂ ಪಲ್ಲುವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೂ ಧರಿಸುತ್ತಿದ್ದರು ಎಂದಿದ್ದಾರೆ.

ಹಿಜಾಬ್‌ ವಿವಾದವನ್ನು ಪಿಎಫ್‌ಐ ಉದ್ದೇಶಪೂರ್ವಕವಾಗಿ ಹುಟ್ಟುಹಾಕಿದೆಯೆಂದು ಸರ್ಕಾರ ಕೋರ್ಟಿನಲ್ಲಿ ಹೇಳಿರುವುದಕ್ಕೆ ಪತ್ರಕರ್ತರು ಪ್ರತಿಕ್ರಿಯೆ ಕೇಳಿದಾಗ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಪಲ್ಲು ಕೂಡಾ ಹಿಜಾಬ್‌ ಮಾದರಿಯದ್ದೇ ಅದನ್ನೂ ಕೂಡಾ ಪಿಎಫ್‌ಐ ಸೃಷ್ಟಿಸಿದೆಯೇ ಎಂದು ವ್ಯಂಗ್ಯವಾಗಿ ಕೇಳಿದರು.

ಕೆಲವು ತಿಂಗಳುಗಳ ಹಿಂದೆ ಉಡುಪಿಯಲ್ಲಿ ಹುಟ್ಟಿಕೊಂಡ ಹಿಜಾಬ್‌ ವಿವಾದ ರಾಜ್ಯಾದ್ಯಂತ ಹರಡಿ, ಕೊನೆಗೆ ಹೈಕೋರ್ಟ್‌ ಮೆಟಿಲೇರಿತ್ತು. ಹೈಕೋರ್ಟ್‌ ಸರಕಾರದ ಪರ ತೀರ್ಪು ನೀಡಿದ ನಂತರ ದೂರುದಾರರು ಸುಪ್ರೀಕೋರ್ಟ್‌ ಮೊರೆ ಹೋಗಿದ್ದರು. ಈಗ ಕೆಲವು ದಿನಗಳಿಂದ ಈ ಕುರಿತು ಸುಪ್ರೀಮ್‌ ಕೋರ್ಟಿನಲ್ಲಿ ವಾದಗಳು ನಡೆಯುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು