Wednesday, July 2, 2025

ಸತ್ಯ | ನ್ಯಾಯ |ಧರ್ಮ

ಬ್ರಾಹ್ಮಣ ಸಮಾಜ ಮೂರ್ಖ ಸಮಾಜ: ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ  ಪ್ರಮೋದ್ ಮುತಾಲಿಕ್ ಅವರು ಮುಸ್ಲಿಮರನ್ನು ವಿರೋಧಿಸುವ ಭರದಲ್ಲಿ ಬ್ರಾಹ್ಮಣ ಸಮಾಜವನ್ನು ಮೂರ್ಖ ಸಮಾಜ ಎನ್ನುವ ಮೂಲಕ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ.

ಮುಸ್ಲಿಮರ ವಿರುದ್ಧ ಅಸಹನೆ ಮುಂದುವರೆಸುತ್ತಿರುವ ಪ್ರಮೋದ್ ಮುತಾಲಿಕ್ ಈ ಸಂಬಂಧವಾಗಿ ಬ್ರಾಹ್ಮಣರ ವಿರುದ್ಧ ಕಿಡಿ ಕಾರಿದ್ದಾರೆ.

ಬ್ರಾಹ್ಮಣ ಸಮಾಜ ಮೂರ್ಖ ಸಮಾಜ. ರಾಮ್ ರಹೀಮ್ ಮಿಲ್ಕ್ ಡೈರಿಯಲ್ಲಿ‌ ಹಾಲು ತುಪ್ಪ ಖರೀದಿ ಮಾಡುತ್ತಾರೆ. ಮುಸ್ಲಿಮರ ಹತ್ತಿರ ಎಲೆ, ಹೂ ಖರೀದಿ ಮಾಡಿದರೆ ಅಶಾಸ್ತ್ರ ಆಗುತ್ತದೆ. ಶಾಸ್ತ್ರ ಇದನ್ನ ಒಪ್ಪಲ್ಲ. ದೇವರು ಶಾಪ ಕೊಡುತ್ತಾನೆ ಎಂದು ಮುಸ್ಲಿಮರನ್ನು ವಿರೋಧಿಸುವ ಭರದಲ್ಲಿ ಬ್ರಾಹ್ಮಣ ಸಮಾಜವನ್ನು ಅವಹೇಳನ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page