ವಕ್ಫ್ ವಿವಾದದ ನಡುವೆ ಮಹಾರಾಷ್ಟ್ರ ಸರ್ಕಾರದಿಂದ ವಕ್ಫ್ ಗೆ 10 ಕೋಟಿ ಅನುದಾನ ಬಿಡುಗಡೆ
ಲಿಂಕ್ ನಕಲಿಸಲಾಗಿದೆ ✓
ರಾಜ್ಯದಲ್ಲಿ ವಕ್ಫ್ ವಿಚಾರಕ್ಕೆ ಸಂಬಂಧಿಸಿ ದೊಡ್ಡ ವಿವಾದ ನಡೆಯುತ್ತಿರುವ ನಡುವೆ ಅತ್ತ ಮಹಾರಾಷ್ಟ್ರದ ಮಹಾಯುತಿ ಸರ್ಕಾರ ತನ್ನ ಸರ್ಕಾರ ರಚನೆಯ ಮೊದಲ ಹಂತದಲ್ಲೇ ವಕ್ಫ್ ಮಂಡಳಿಗೆ 10 ಕೋಟಿ ರೂಪಾಯಿ ಅನುದಾನ ನೀಡಿದೆ.
ಮಹಾರಾಷ್ಟ್ರದಲ್ಲಿ ಮಹಾಯುತಿಯು ವಕ್ಫ್ ಮಂಡಳಿಗೆ 10 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದೆ. 10 ಕೋಟಿ ರೂಪಾಯಿ ಅನುದಾನ ನೀಡಲು ಮಹಾಯುತಿ ನಿರ್ಧಾರಿಸಿದೆ. ಇತ್ತ ಕರ್ನಾಟಕ ದೆಹಲಿ ಸೇರಿದಂತೆ ಹಲವಡೆ ವಕ್ಫ್ ವಿರುದ್ಧ ಪ್ರತಿಭಟಿಸುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅನುದಾನ ಘೋಷಣೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಈ ಒಂದು ನಿರ್ಧಾರವು ಕಾಂಗ್ರೆಸ್ ಗೆ ಪ್ರಬಲ ಅಸ್ತ್ರ ವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕ ಸೇರಿದಂತೆ ದೆಹಲಿ ಮಟ್ಟದವರೆಗೂ ಬಿಜೆಪಿ ನಾಯಕರು ವಕ್ಫ್ ವಿರುದ್ಧ ಪ್ರಬಲವಾದಂತಹ ಹೋರಾಟ ಮಾಡುತ್ತಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರದ ಈ ಒಂದು ನಿರ್ಧಾರ ಕಾಂಗ್ರೆಸ್ ಗೆ ಪ್ರಬಲ ಅಸ್ತ್ರವಾಗುವ ಸಾಧ್ಯತೆ ಇದೆ.
Peepal Media Desk
Peepal Media · ಬ್ರೇಕಿಂಗ್ ಸುದ್ದಿ ವಿಭಾಗ