ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿನ ಮುನ್ಸೂಚನೆ
ಲಿಂಕ್ ನಕಲಿಸಲಾಗಿದೆ ✓
ಕುತೂಹಲದ ರಾಜ್ಯವಾಗಿದ್ದ ಉತ್ತರ ಪ್ರದೇಶದಲ್ಲಿ ಈಗ ಬಿಜೆಪಿ ಹಿನ್ನಡೆ ಅನುಭವಿಸಿದೆ. ಬಹುತೇಕ 55 ಕ್ಷೇತ್ರಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಯೋಗಿ ಆದಿತ್ಯನಾಥರಿಗೆ ಈ ಫಲಿತಾಂಶ ದೊಡ್ಡ ಆಘಾತ ಎಂದೇ ಊಹಿಸಲಾಗುತ್ತಿದೆ.
ಚುನಾವಣೆಗೂ ಮುನ್ನ ರಾಮಮಂದಿರದ ವಿಷಯವನ್ನೇ ತಮ್ಮ ಚುನಾವಣಾ ಅಸ್ತ್ರವನ್ನಾಗಿಸಿದ ಬಿಜೆಪಿಗೆ ಈ ಫಲಿತಾಂಶ ಬೇರೊಂದು ಸಂದೇಶ ರವಾನಿಸಿದಂತಾಗಿದೆ.
P
Peepal Media Desk
Peepal Media · ದೇಶ ವಿಭಾಗ
ಹಿಂದಿನ ಸುದ್ದಿ