ಸಂವಿಧಾನ ನಿಯಮ ಉಲ್ಲಂಘನೆ : ನೂತನ WFI ಸಮಿತಿಯನ್ನು ಅಮಾನತಿನಲ್ಲಿಟ್ಟ ಕೇಂದ್ರ ಸರ್ಕಾರ
ಲಿಂಕ್ ನಕಲಿಸಲಾಗಿದೆ ✓
ಭಾರತೀಯ ಕುಸ್ತಿ ಫೆಡರೇಶನ್ (WFI) ಹೊಸದಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯನ್ನು (EC) ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ಅಮಾನತುಗೊಳಿಸಿದೆ ಮತ್ತು ಫೆಡರೇಶನ್ ಕಾರ್ಯಾಚರಣೆಗಳನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಗೆ ನಿರ್ದೇಶನ ನೀಡಿದೆ.
ಕುಸ್ತಿಯಲ್ಲಿ ಒಲಿಂಪಿಕ್ ಪದಕ ಗೆದ್ದ ಭಾರತದ ಏಕೈಕ ಮಹಿಳೆ ಸಾಕ್ಷಿ ಮಲಿಕ್ ಅವರು WFI ಚುನಾವಣಾ ಫಲಿತಾಂಶಗಳಿಂದ ನೊಂದು ಕ್ರೀಡೆಯಿಂದ ನಿವೃತ್ತಿ ಘೋಷಿಸಿದರು ಮತ್ತು ಬಜರಂಗ್ ಪುನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಕೆಲವೇ ದಿನಗಳಲ್ಲಿ ಸಚಿವಾಲಯದ ಕಡೆಯಿಂದ ಈ ನಿರ್ಧಾರವು ಹೊರಬಿದ್ದಿದೆ.
ಆಶ್ಚರ್ಯಕರ ವಿಚಾರವೆಂದರೆ, ನೂತನವಾಗಿ ಡಬ್ಲ್ಯುಎಫ್ಐ ಅಧ್ಯಕ್ಷರಾದ ಸಂಜಯ್ ಸಿಂಗ್ ಅವರು ತಮ್ಮ ಸಮೀಪದ ಸ್ಪರ್ಧಿ ಅನಿತಾ ಶೆರಾನ್ ಅವರನ್ನು ಸೋಲಿಸಿದ ನಂತರ ಡಬ್ಲ್ಯುಎಫ್ಐ ಅಧ್ಯಕ್ಷರಾದ ದಿನವಾದ ಡಿಸೆಂಬರ್ 21 ರ ಸಂಜೆಯೇ ಉತ್ತರ ಪ್ರದೇಶದ ಗೊಂಡಾ ಬಳಿ ಬ್ರಿಜ್ ಭೂಷಣ್ ಅವರ ಕ್ಷೇತ್ರವಾದ ಕೈಸರ್ಗಂಜ್ನಿಂದ ಕೇವಲ 50 ಕಿಮೀಗಿಂತ ಕಡಿಮೆ ದೂರದಲ್ಲಿ 15 ಮತ್ತು 20 ವರ್ಷದೊಳಗಿನ ರಾಷ್ಟ್ರೀಯ ಆಟಗಾರರನ್ನು ಘೋಷಿಸಿದ್ದಾರೆ.
ಇದನ್ನು “ತರಾತುರಿಯ ನಿರ್ಧಾರ” ಎಂದು ಕರೆದ ಕ್ರೀಡಾ ಸಚಿವಾಲಯವು ಈ ಆಯ್ಕೆ ನಮ್ಮ ಗಮನಕ್ಕೆ ತಾರದೇ ತಂದದ್ದಾಗಿದೆ ಮತ್ತು ಈ ಪ್ರಕಟಣೆಯು WFI ನ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.
ಭಾರತದ ಕುಸ್ತಿ ಫೆಡರೇಶನ್ನ ಹೊಸದಾಗಿ ಚುನಾಯಿತರಾದ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಚುನಾಯಿತರಾದ ದಿನದಂದೇ ನಡೆದ ಈ ಘೋಷಣೆ ತರಾತುರಿಯಲ್ಲಿದೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಅಗತ್ಯ ಸೂಚನೆ ನೀಡದೆ ಮತ್ತು ಡಬ್ಲ್ಯುಎಫ್ಐ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೆ,” ಈ ನಿರ್ಧಾರ ತಗೆದುಕೊಂಡಿದೆ ಎಂದು ತಿಳಿಸಿದೆ.
Peepal Media Desk
Peepal Media · ಬ್ರೇಕಿಂಗ್ ಸುದ್ದಿ ವಿಭಾಗ