ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

“ದೇವರು ರಾಜಕೀಯದಲ್ಲಿ ಇರಬಾರದು” ; ಮೋದಿ ಹೇಳಿಕೆ ಲೇವಡಿ ಮಾಡಿದ ಮಮತಾ ಬ್ಯಾನರ್ಜಿ

PPeepal Media Desk

Peepal Media Desk ಬ್ರೇಕಿಂಗ್ ಸುದ್ದಿ, ರಾಜಕೀಯ

• 1 ನಿಮಿಷದ ಓದು

“ದೇವರು ರಾಜಕೀಯದಲ್ಲಿ ಇರಬಾರದು” ; ಮೋದಿ ಹೇಳಿಕೆ ಲೇವಡಿ ಮಾಡಿದ ಮಮತಾ ಬ್ಯಾನರ್ಜಿ

ದೇವರು ರಾಜಕೀಯದಲ್ಲಿ ಇರಬಾರದು ಅಥವಾ ಗಲಭೆಗಳಿಗೆ ಪ್ರಚೋದನೆ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ನರೇಂದ್ರ ಮೋದಿಯವರ  “ದೇವದೂತ” ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಮೋದಿಯವರಿಗೆ ದೇವಾಲಯವನ್ನು ನಿರ್ಮಿಸಿ ಸಾಂಪ್ರದಾಯಿಕ ಕೊಡುಗೆಗಳನ್ನು ನೀಡಬಹುದು ಎಂದು ಸಲಹೆ ನೀಡಿದರು.

“ಅವರು (ಪಿಎಂ ಮೋದಿ) ದೇವರುಗಳ ದೇವರು ಎಂದು ಒಬ್ಬ ಬಿಜೆಪಿ ನಾಯಕ ಹೇಳುತ್ತಾರೆ. ಭಗವಾನ್ ಜಗನ್ನಾಥನೇ ಮೋದಿಯ ಭಕ್ತ ಅಂತ ಇನ್ನೊಬ್ಬ ನಾಯಕ ಹೇಳುತ್ತಾರೆ, ಇದೆಲ್ಲಾ ಏನು ಸೂಚಿಸುತ್ತಿದೆ” ಎಂದು ಮಮತಾ ಬ್ಯಾನರ್ಜಿ ಬರಾಸತ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.

“ದೇವರು ಎನ್ನುವ ವ್ಯಕ್ತಿ ರಾಜಕೀಯದಲ್ಲಿ ಇರಬಾರದು. ದೇವರು ಗಲಭೆ ಎಬ್ಬಿಸಬಾರದು. ಆತನಿಗೆ ದೇವಸ್ಥಾನ ನಿರ್ಮಿಸಿ ಪ್ರಸಾದ, ಹೂವು, ಸಿಹಿತಿಂಡಿ ನೀಡುತ್ತೇವೆ, ಬಯಸಿದಲ್ಲಿ ಧೋಕ್ಲಾ ಕೂಡ ನೀಡುತ್ತೇವೆ” ಎಂದು ನರೇಂದ್ರ ಮೋದಿಯ ಹೇಳಿಕೆಗೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿಯವರ ಹೇಳಿಕೆ ಬಂದಿದೆ. “ನನ್ನ ತಾಯಿ ಜೀವಂತವಾಗಿರುವವರೆಗೆ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಾನು ಭಾವಿಸುತ್ತಿದ್ದೆ. ಆಕೆಯ ನಿಧನದ ನಂತರ, ನನ್ನ ಅನುಭವಗಳನ್ನು ನೋಡಿದಾಗ, ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ. ಈ ಶಕ್ತಿ ನನ್ನ ದೇಹದಿಂದಲ್ಲ. ಅದನ್ನು ದೇವರು ನನಗೆ ಕೊಟ್ಟಿದ್ದಾನೆ. ನಾನು ದೇವರು ಕಳುಹಿಸಿದ ಸಾಧನವಲ್ಲದೆ ಬೇರೇನೂ ಅಲ್ಲ.” ಎಂಬ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗುತ್ತಿದೆ.

ಇಷ್ಟೇ ಅಲ್ಲದೇ ಬಿಜೆಪಿಯ ಪುರಿ ಲೋಕಸಭಾ ಅಭ್ಯರ್ಥಿ ಸಂಬಿತ್ ಪಾತ್ರ ಕೂಡ ಒಡಿಶಾದ ಅತ್ಯಂತ ಪೂಜ್ಯ ದೇವರು “ಭಗವಾನ್ ಜಗನ್ನಾಥ ಪ್ರಧಾನಿ ನರೇಂದ್ರ ಮೋದಿಯ ಭಕ್ತ” ಎಂದು ಹೇಳುವ ಮೂಲಕ ಕಳೆದ ವಾರ ವಿವಾದವನ್ನು ಹುಟ್ಟುಹಾಕಿದ್ದರು.

“ಎಲ್ಲರೂ ಜೈವಿಕವಾಗಿ ಹುಟ್ಟಿದ್ದರೆ, ನರೇಂದ್ರ ಮೋದಿ ಜಿ ಜೈವಿಕ ಅಲ್ಲ. ಮೋದಿಜೀ ಉಪರ್ ಸೆ ತಪಕ್ ಕ್ರ ಆಯ್ ಹೈ. ಉಂಕೋ ಪರಮಾತ್ಮ ನೇ ಹಿಂದೂಸ್ತಾನ್ ಕೇ ಭೇಜಾ ಹೈ. ಅವರನ್ನು ಅಂಬಾನಿ ಮತ್ತು ಅದಾನಿಗೆ ಸಹಾಯ ಮಾಡಲು ಅವರ ‘ಪರಮಾತ್ಮ’ ಕಳುಹಿಸಿದ್ದಾರೆ. ಈ ಪರಮಾತ್ಮ ರೈತರು, ಕಾರ್ಮಿಕರು ಮತ್ತು ಬಡವರಿಗೆ ಸಹಾಯ ಮಾಡಲು ಬಂದವರಲ್ಲ. ಇದು ಯಾವ ರೀತಿಯ ದೇವರು, ಇದು ಪ್ರಧಾನಿ ಮೋದಿಯ ದೇವರು” ಎಂದು ರಾಹುಲ್ ಗಾಂಧಿ ಹೇಳಿದ್ದರು.

PPeepal Media Desk

Peepal Media Desk

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು