ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

ಜಿಬಿಎ ಚುನಾವಣೆ: ವಾರ್ಡ್‌ವಾರು ಮತದಾರರ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸ

PPeepal Media Desk

Peepal Media Desk ಬ್ರೇಕಿಂಗ್ ಸುದ್ದಿ, ರಾಜ್ಯ

• 1 ನಿಮಿಷದ ಓದು

ಜಿಬಿಎ ಚುನಾವಣೆ: ವಾರ್ಡ್‌ವಾರು ಮತದಾರರ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸ

ಬೆಂಗಳೂರು: ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ವ್ಯಾಪ್ತಿಯಲ್ಲಿ ಜೂನ್‌ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಚುನಾವಣಾ ಸಿದ್ಧತೆಗಳು ಚುರುಕುಗೊಂಡಿವೆ. ಇದರ ನಡುವೆಯೇ, ಐದು ನಗರಪಾಲಿಕೆಗಳ ವಾರ್ಡ್‌ಗಳಲ್ಲಿ ಮತದಾರರ ಅಸಮಾನ ಹಂಚಿಕೆ ಇರುವ ವಿಚಾರ ಬೆಳಕಿಗೆ ಬಂದಿದೆ.

ಕರಡು ಮತದಾರರ ಪಟ್ಟಿ ಬಿಡುಗಡೆ ಬಳಿಕ ನಡೆದ ಪರಿಶೀಲನೆಯಲ್ಲಿ, ಒಂದೊಂದು ವಾರ್ಡ್‌ನಲ್ಲೂ ಮತದಾರರ ಸಂಖ್ಯೆ ಭಿನ್ನವಾಗಿರುವುದು ಪತ್ತೆಯಾಗಿದೆ. ಇದರಿಂದ ‘ಒಬ್ಬ ವ್ಯಕ್ತಿ–ಒಂದು ಮತ’ ಎಂಬ ಮೂಲಭೂತ ಪ್ರಜಾಸತ್ತಾತ್ಮಕ ತತ್ವಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪೂರ್ವ ನಗರಪಾಲಿಕೆಯ ಕೊತ್ತನೂರು ವಾರ್ಡ್‌ (ವಾರ್ಡ್‌ 16)ನಲ್ಲಿ ಕೇವಲ 10,926 ಮತದಾರರಿದ್ದರೆ, ಪಶ್ಚಿಮ ನಗರಪಾಲಿಕೆಯ ರಾಜರಾಜೇಶ್ವರಿನಗರ ವಾರ್ಡ್‌ (23)ನಲ್ಲಿ 49,530 ಮತದಾರರು ಇದ್ದಾರೆ. ಈ ವ್ಯತ್ಯಾಸವು ಕೆಲ ವಾರ್ಡ್‌ಗಳಲ್ಲಿ ಕಡಿಮೆ ಮತಗಳಿಂದಲೇ ಕಾರ್ಪೊರೇಟರ್‌ ಆಯ್ಕೆಯಾಗುವ ಸಾಧ್ಯತೆ ಇರುವುದನ್ನು ಸೂಚಿಸುತ್ತದೆ.

ಉತ್ತರ ನಗರಪಾಲಿಕೆಯಲ್ಲಿ ಅತಿಹೆಚ್ಚು ಅಸಮತೋಲನ ಕಂಡುಬಂದಿದ್ದು, ನಾಲ್ಕು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ 40 ಸಾವಿರ ದಾಟಿದರೆ, ಕೆಲ ವಾರ್ಡ್‌ಗಳಲ್ಲಿ 17 ಸಾವಿರಕ್ಕೆ ಮಾತ್ರ ಸೀಮಿತವಾಗಿದೆ. ದಕ್ಷಿಣ ನಗರಪಾಲಿಕೆಯಲ್ಲಿ ಕೆಲವು ಚಿಕ್ಕ ವಾರ್ಡ್‌ಗಳಲ್ಲಿ 14 ಸಾವಿರ ಮತದಾರರು ಇದ್ದರೆ, ದೊಡ್ಡ ವಾರ್ಡ್‌ಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮತದಾರರು ದಾಖಲಾಗಿದ್ದಾರೆ.

ಒಟ್ಟಾರೆ369 ವಾರ್ಡ್‌ಗಳಪೈಕಿ:

  • 234 ವಾರ್ಡ್‌ಗಳಲ್ಲಿ 20–30 ಸಾವಿರ ಮತದಾರರು
  • 88 ವಾರ್ಡ್‌ಗಳಲ್ಲಿ 10–20 ಸಾವಿರ ಮತದಾರರು
  • 39 ವಾರ್ಡ್‌ಗಳಲ್ಲಿ 30–40 ಸಾವಿರ ಮತದಾರರು
  • 8 ವಾರ್ಡ್‌ಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ

ಈ ಅಸಮಾನ ಹಂಚಿಕೆ ಚುನಾವಣಾ ಸಮಾನತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

ಗೆಲುವಿಗೆ ಹೆಚ್ಚಿನ ಸವಾಲು
ಹೆಚ್ಚು ಮತದಾರರಿರುವ ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಕಾರ್ಪೊರೇಟರ್‌ಗಳು, ಕಡಿಮೆ ಮತದಾರರಿರುವ ವಾರ್ಡ್‌ಗಳಿಗಿಂತ ಹೆಚ್ಚಿನ ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಬಜೆಟ್‌ ಹಂಚಿಕೆ, ಮೂಲಸೌಕರ್ಯ ಒದಗಿಕೆ ಹಾಗೂ ಸಾರ್ವಜನಿಕ ಸೇವೆಗಳ ನಿರ್ವಹಣೆಯಲ್ಲೂ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ.

ನಗರಪಾಲಿಕೆವಾರುಪ್ರಮುಖ ಅಂಕಿ-ಅಂಶಗಳು:

  • ಕೇಂದ್ರ ನಗರಪಾಲಿಕೆ (63 ವಾರ್ಡ್‌ಗಳು)
    ಒಟ್ಟು ಮತದಾರರು: 14.2 ಲಕ್ಷ
    ಕಡಿಮೆ: ಇಂದಿರಾನಗರ – 15,407
    ಹೆಚ್ಚು: ಪಾದರಾಯನಪುರ – 32,898
  • ಉತ್ತರ ನಗರಪಾಲಿಕೆ (72 ವಾರ್ಡ್‌ಗಳು)
    ಒಟ್ಟು ಮತದಾರರು: 19.5 ಲಕ್ಷ
    ಕಡಿಮೆ: ಜಾಲಹಳ್ಳಿ – 16,968
    ಹೆಚ್ಚು: ಸಂಪಿಗೆಹಳ್ಳಿ – 45,892
  • ಪೂರ್ವ ನಗರಪಾಲಿಕೆ (50 ವಾರ್ಡ್‌ಗಳು)
    ಒಟ್ಟು ಮತದಾರರು: 10.4 ಲಕ್ಷ
    ಕಡಿಮೆ: ಕೊತ್ತನೂರು – 10,926
    ಹೆಚ್ಚು: ಕಲ್ಕೆರೆ – 35,678
  • ದಕ್ಷಿಣ ನಗರಪಾಲಿಕೆ (72 ವಾರ್ಡ್‌ಗಳು)
    ಒಟ್ಟು ಮತದಾರರು: 17.4 ಲಕ್ಷ
    ಕಡಿಮೆ: ಜಯನಗರ (ಪೂರ್ವ) – 14,454
    ಹೆಚ್ಚು: ಸುಬ್ರಮಣ್ಯಪುರ – 49,518
  • ಪಶ್ಚಿಮ ನಗರಪಾಲಿಕೆ (112 ವಾರ್ಡ್‌ಗಳು)
    ಒಟ್ಟು ಮತದಾರರು: 27.2 ಲಕ್ಷ
    ಕಡಿಮೆ: ನೆಲಗದರನಹಳ್ಳಿ – 15,059
    ಹೆಚ್ಚು: ಆರ್‌.ಆರ್‌.ನಗರ – 49,530
PPeepal Media Desk

Peepal Media Desk

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು