ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಮೊಬೈಲ್ ಬಳಕೆದಾರರಿಗೆ ‘ಟ್ರಾಯ್’ ಸಿಹಿ ಸುದ್ದಿ- ದುಬಾರಿ ರೀಚಾರ್ಜ್‌ಗೆ ಬ್ರೇಕ್

ಮೊಬೈಲ್ ಬಳಕೆದಾರರಿಗೆ ‘ಟ್ರಾಯ್’ ಸಿಹಿ ಸುದ್ದಿ- ದುಬಾರಿ ರೀಚಾರ್ಜ್‌ಗೆ ಬ್ರೇಕ್

ನವದೆಹಲಿ:  ಇಂಟರ್ನೆಟ್ ಬಳಸದೆ ಕೇವಲ ಕರೆ ಮತ್ತು ಮೆಸೇಜ್ (SMS) ಸೇವೆಯನ್ನು ಬಯಸುವ ಕೋಟ್ಯಂತರ ಮೊಬೈಲ್ ಗ್ರಾಹಕರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಬಿಗ್ ರಿಲೀಫ್ ನೀಡಿದೆ.ಕೇವಲ ವಾಯ್ಸ್ ಹಾಗೂ ಎಸ್‌ಎಮ್‌ಎಸ್ ಆಧಾರಿತ ಕೈಗೆಟುಕುವ ಬೆಲೆಯ ಪ್ಲಾನ್‌ಗಳನ್ನು  ಪರಿಚಯಿಸುವಂತೆ ಟೆಲಿಕಾಂ ಕಂಪನಿಗಳಿಗೆ ಹೊಸ ಆದೇಶ ಹೊರಡಿಸಿದೆ. ಟೆಲಿಕಾಂ ಗ್ರಾಹಕರ ಹಿತರಕ್ಷಣೆ ನಿಯಮಾವಳಿಗಳ (13ನೇ ತಿದ್ದುಪಡಿ) ಅಡಿಯಲ್ಲಿ ಟ್ರಾಯ್ ಈ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ.

ಬದಲಾವಣೆಗೆ ಕಾರಣವೇನು?

ಇತ್ತೀಚಿನ ವರ್ಷಗಳಲ್ಲಿ ಜಿಯೋ, ಏರ್‌ಟೆಲ್ ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಕೇವಲ ಕರೆ ಸೌಲಭ್ಯವಿರುವ ರೀಚಾರ್ಜ್ ಪ್ಲಾನ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದವು. ಇಂಟರ್ನೆಟ್ ಬಳಸದ ಫೀಚರ್ ಫೋನ್ (ಕೀಪ್ಯಾಡ್ ಫೋನ್) ಬಳಕೆದಾರರು ಸಹ ಅನಿವಾರ್ಯವಾಗಿ ಡೇಟಾ ಒಳಗೊಂಡಿರುವ ದುಬಾರಿ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಟ್ರಾಯ್, ಸಾರ್ವಜನಿಕರು ಹಾಗೂ ಟೆಲಿಕಾಂ ಕಂಪನಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಈ ಹೊಸ ನಿರ್ಧಾರಕ್ಕೆ ಬಂದಿದೆ.

ಹೊಸ ನಿಯಮಾವಳಿಯ ಪ್ರಮುಖ ಅಂಶಗಳು:

  • ಡೇಟಾ ಪ್ಲಾನ್‌ಗಳಂತೆಯೇ 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ವಾಯ್ಸ್ ಮತ್ತು ಎಸ್‌ಎಮ್‌ಎಸ್ ಪ್ಲಾನ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು.
  • ಪ್ರತಿ ತಿಂಗಳು ಒಂದೇ ದಿನಾಂಕದಂದು ನವೀಕರಣಗೊಳ್ಳುವ (Renew) ಸರಳ ಮಾಸಿಕ ಯೋಜನೆಗಳನ್ನು ನೀಡಬೇಕು.
  • ಹೆಚ್ಚು ದಿನಗಳ ವ್ಯಾಲಿಡಿಟಿ (Validity) ಬಯಸುವ ಗ್ರಾಹಕರಿಗಾಗಿ ಕನಿಷ್ಠ ಒಂದು ದೀರ್ಘಾವಧಿಯ ‘ವಾಯ್ಸ್ ಮತ್ತು SMS’ ಪ್ಲಾನ್ ಲಭ್ಯವಿರಬೇಕು.

ಬಡ ಮತ್ತು ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲ!

ಟ್ರಾಯ್‌ನ ಈ ನಿರ್ಧಾರದಿಂದಾಗಿ ಹೆಚ್ಚುವರಿ ಡೇಟಾಗೆ ಹಣ ನೀಡಲಾಗದೆ ಕಷ್ಟಪಡುತ್ತಿದ್ದ ಬಡ ಕುಟುಂಬಗಳು, ವಯೋವೃದ್ಧರು ಹಾಗೂ ಫೀಚರ್ ಫೋನ್ ಬಳಸುವ ಸಾಮಾನ್ಯ ಗ್ರಾಹಕರಿಗೆ ದೊಡ್ಡ ಮಟ್ಟದ ಆರ್ಥಿಕ ಸಮಾಧಾನ ಸಿಗಲಿದೆ. ತಮಗೆ ಅಗತ್ಯವಿರುವ ಸೇವೆಗೆ ಮಾತ್ರ ಹಣ ಪಾವತಿಸುವ ಸ್ವಾತಂತ್ರ್ಯ ಈಗ ಗ್ರಾಹಕರಿಗೆ ಸಿಕ್ಕಂತಾಗಿದೆ.

ವಿಷಯಗಳು: #india #karnataka #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು