Monday, October 6, 2025

ಸತ್ಯ | ನ್ಯಾಯ |ಧರ್ಮ

ಬ್ರೇಕಿಂಗ್‌ ನ್ಯೂಸ್‌ | ಬೆಂಗಳೂರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿ ನಡೆಸುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಪೊಲೀಸರು ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ನೈಜಿರಿಯಾ ಮೂಲದ ವ್ಯಕ್ತಿಯೊಬ್ಬನನ್ನು ತಮ್ಮ ಬಲೆಗೆ ಕೆಡವಿದ್ದಾರೆ.

ಆರೋಪಿಯನ್ನು ನೈಜಿರಿಯಾ (Nigerian) ಮೂಲದ ಬೆಂಜಮಿನ್‌ ಎಂದು ಗುರುತಿಸಲಾಗಿದ್ದು ಭಾರಿ ಪ್ರಮಾಣದ ಮಾದಕ ವಸ್ತುವಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 10 ಕೋಟಿ ಮೌಲ್ಯದ ಎಂಡಿಎಂಎ (MDMA) ವಶಕ್ಕೆ ಪಡೆದಿರುವುದಾಗಿ ಪೊಲೀಶರು ತಿಳಿಸಿದ್ದಾರೆ.

ಆರೋಪಿಯು ರಾಮಮೂರ್ತಿ ನಗರದಲ್ಲಿ ಡ್ರಗ್ಸ್‌ ಮಾರುತ್ತಿದ್ದ ಎನ್ನಲಾಗಿದ್ದು, ಸಿಸಿಬಿಯ ನಾರ್ಕೊಟಿಕ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿ ಬೆಂಜಮಿನ್‌ (Benjamin) ಎನ್ನುವವನನ್ನು ವಶಕ್ಕೆ ಪಡೆದಿದ್ದಾರೆ.

ನಾರ್ಕೊಟಿಕ್ಸ್‌ (Narcotics) ವಿಭಾಗದ ಎಸಿಪಿ ಕುಮಾರ್‌, ಇನ್ಸ್‌ ಪೆಕ್ಟರ್‌ ಭರತ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ವಿಚಾರಣೆ ವೇಳೆ ಮೊದಲಿಗೆ ಆರೋಪಿ ಬಳಿ 100 ಗ್ರಾಂ MDMA ಪತ್ತೆಯಾಗಿತ್ತು. ನಂತರ ಮುಂದಿನ ತನಿಖೆಯಲ್ಲಿ ಎಂಡಿಎಂಎ ಕ್ರಿಸ್ಟಲ್‌ ತಯಾರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯು MDMA ತಯಾರಿಸಲು ಕಚ್ಚಾವಸ್ತುಗಳನ್ನು ಖರೀದಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page