Tuesday, January 27, 2026

ಸತ್ಯ | ನ್ಯಾಯ |ಧರ್ಮ

ವ್ಯಾಕ್ಸಿನ್ ಕೊಟ್ಟ ಕಂಪನಿಯಿಂದಲೂ ಲಂಚ: ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಡಿ.ಕೆ.ಶಿವಕುಮಾರ್‌

ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಜನರ, ಬಡವರ ಪರವಾಗಿ ಇಲ್ಲವಾಗಿದೆ. ಕೋರೊನಾ ಸಮಯದಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತರು, ಚಿಕಿತ್ಸೆ ಸರಿಯಾಗಿ ಸಿಗದೆ ರಾಜ್ಯದಲ್ಲಿ 4 ಲಕ್ಷ ಜನ ಸತ್ತಿದ್ದಾರೆ. ಈಗ ವ್ಯಾಕ್ಸಿನ್ ತೆಗೆದುಕೊಂಡವರು ಸಾಯುವ ಕಾಲ ಬಂದಿದೆ. ಬಿಜೆಪಿಯವರು ಈ ವ್ಯಾಕ್ಸಿನ್ ಕೊಟ್ಟ ಕಂಪನಿಯಿಂದಲೂ ಲಂಚ ಹೊಡೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅರೋಪಿಸಿದ್ದಾರೆ.
ಇಂದು(ಶುಕ್ರವಾರ) ತಮ್ಮ ಅಧಿಕೃತ ಜಾಲತಾಣ ಎಕ್ಸ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಮೋದಿ ಫೋಟೊ ಇರುವ ಪ್ರಮಾಣಪತ್ರ ಕೊಟ್ಟರು. ಸತ್ತವರ ಸರ್ಟಿಫಿಕೆಟ್ ಗೆ ಏಕೆ ಮೋದಿ ಫೋಟೋ ಹಾಕಿಲಿಲ್ಲ. ಜನರಿಗೆ ಸಹಾಯ ಮಾಡದೆ ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದರು. ಕೋರೋನಾ ಸಮಯದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಪ್ರಕಟಿಸಿತು. ಆ ಹಣ ಯಾರಿಗಾದರೂ ಬಂದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಕರಾವಳಿಯ ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್ ಅನ್ನು ಬೇರೆ ಬ್ಯಾಂಕ್ ಗಳ ಜೊತೆ ವಿಲೀನ ಮಾಡಿ ಒಂದೂ ಬ್ಯಾಂಕ್ ಇಲ್ಲದಂತೆ ಮಾಡಿದ್ದು ಬಿಜೆಪಿಯ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.

ಆಹಾರ ಭದ್ರತಾ ಕಾಯ್ದೆ, ಉಚಿತವಾಗಿ ಅಕ್ಕಿ ಕೊಡುವ ಯೋಜನೆ ತಂದಿದ್ದು ಕಾಂಗ್ರೆಸ್. ಹೆಣ್ಣುಮಕ್ಕಳಿಗೆ ಪದವಿಯ ತನಕ ಉಚಿತ ಶಿಕ್ಷಣ ಯೋಜನೆ ತಂದಿದ್ದು ಕಾಂಗ್ರೆಸ್. ನರೇಗಾ ಮೂಲಕ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದು ಕಾಂಗ್ರೆಸ್, ಬಿಜೆಪಿಯವರು ಬರಗಾಲದಲ್ಲಿ ನರೇಗಾ ಕೆಲಸ ಹೆಚ್ಚಳ ಮಾಡಿ ಎಂದರೂ ಮಾಡಲಿಲ್ಲ ಎಂದು ಕಿಡಿ ಕಾರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page