Saturday, July 12, 2025

ಸತ್ಯ | ನ್ಯಾಯ |ಧರ್ಮ

ಬ್ರಿಕ್‌ ಸೂಚ್ಯಂಕ: ಭಾರತದ ಸ್ಥಾನ ಸತತ ಮೂರು ವರ್ಷಗಳಿಂದ ಕುಸಿತ

ಹೊಸದಿಲ್ಲಿ: ಪ್ರತಿಭಾ ಸ್ಪರ್ಧಾತ್ಮಕತೆಯ ಅಂತಾರಾಷ್ಟ್ರೀಯ ಸೂಚ್ಯಂಕದಲ್ಲಿ ನಮ್ಮ ದೇಶದ ಸ್ಥಾನ ಕುಸಿದಿದೆ. ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಸಂಬಂಧಿಸಿದ ಈ ಸೂಚ್ಯಂಕದಡಿ ದೇಶವು ಈ ತಿಂಗಳ ಆರಂಭದಲ್ಲಿ 83ರಿಂದ 103ನೇ ಸ್ಥಾನಕ್ಕೆ ಕುಸಿದಿದೆ, ಇದು ಹತ್ತು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ.

134 BRIC ಸದಸ್ಯ ರಾಷ್ಟ್ರಗಳ ಇತ್ತೀಚಿನ ಶ್ರೇಯಾಂಕಗಳನ್ನು ಪ್ರಕಟಿಸಲಾಗಿದೆ. ಅಲ್ಜೀರಿಯಾ 102ನೇ ಸ್ಥಾನದಲ್ಲಿದ್ದು, ಗ್ವಾಟೆಮಾಲಾ 104ನೇ ಸ್ಥಾನದಲ್ಲಿದ್ದು ನಮ್ಮ ದೇಶ ಇವೆರಡರ ಮಧ್ಯದಲ್ಲಿದೆ. ಈ ಮೂರು ದೇಶಗಳನ್ನು ಕಡಿಮೆ ಮಧ್ಯಮ ವರ್ಗದ ಆದಾಯದ ದೇಶಗಳೆಂದು ಪರಿಗಣಿಸಲಾಗಿದೆ. ರುವಾಂಡಾ, ಪರಾಗ್ವೆ, ಟುನೀಶಿಯಾ, ನಮೀಬಿಯಾ, ಬೊಲಿವಿಯಾ, ಘಾನಾ, ಎಲ್ ಸಾಲ್ವಡಾರ್, ಗ್ಯಾಂಬಿಯಾ, ಕೀನ್ಯಾ, ಮೊರಾಕೊ ಮತ್ತು ಸ್ವಾತಿ ದೇಶಗಳು ಭಾರತಕ್ಕಿಂತ ಉತ್ತಮ ಶ್ರೇಣಿಯನ್ನು ಪಡೆದಿವೆ.

INSEAD ಪ್ರತಿಷ್ಠಿತ ವ್ಯಾಪಾರ ಶಾಲೆ ಈ ಸೂಚ್ಯಂಕವನ್ನು ರೂಪಿಸಿದೆ. ಬ್ರಿಕ್ ರಾಷ್ಟ್ರಗಳ ಪೈಕಿ ಚೀನಾ 40ನೇ ಶ್ರೇಯಾಂಕದೊಂದಿಗೆ ಅಗ್ರಸ್ಥಾನದಲ್ಲಿ, ರಷ್ಯಾ 52ನೇ ಶ್ರೇಯಾಂಕದೊಂದಿಗೆ, ದಕ್ಷಿಣ ಆಫ್ರಿಕಾ 68ನೇ ಸ್ಥಾನದಲ್ಲಿ ಮತ್ತು ಬ್ರೆಜಿಲ್ 69ನೇ ಸ್ಥಾನದಲ್ಲಿದೆ. 2020ರವರೆಗೆ, ನಮ್ಮ ದೇಶವು ಪ್ರತಿಭಾ ಸ್ಪರ್ಧಾತ್ಮಕತೆಯ ವಿಷಯದಲ್ಲಿ ಉತ್ತಮ ಸ್ಥಾನದಲ್ಲಿತ್ತು. ಆ ನಂತರ ಸತತ ಮೂರು ವರ್ಷಗಳಿಂದ ಕುಸಿಯುತ್ತಾ ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page